
ನವದೆಹಲಿ: ಸ್ಕಾಚ್ ವಿಸ್ಕಿಗಳ ಪಾಲಿಗೆ ಜಾಗತಿಕ ಮಟ್ಟದಲ್ಲಿ ಭಾರತವೇ ಅತಿದೊಡ್ಡ ಮಾರುಕಟ್ಟೆಯಾಗಲಿದೆ ಎಂದು ಸ್ಕಾಚ್ ವಿಸ್ಕಿ ಅಸೋಸಿಯೇಷನ್‌ನ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಕೆಂಟ್ ಹೇಳಿದ್ದಾರೆ.
ಭಾರತದ ಸಿಂಗಲ್ ಮಾಲ್ಟ್ ವಿಸ್ಕಿಗಳು ಹೆಚ್ಚು ಬೆಳವಣಿಗೆ ಸಾಧಿಸುತ್ತಿರುವುದನ್ನು ಮಾರ್ಕ್ ಕೆಂಟ್ ಅವರು ಶ್ಲಾಘಿಸಿದ್ದಾರೆ.
ಸ್ಕಾಚ್ ವಿಸ್ಕಿಗಳು 180 ದೇಶಗಳ ಮಾರುಕಟ್ಟೆಗಳಿಗೆ ರಫ್ತಾಗುತ್ತವೆ. ಈ ಪೈಕಿ ಭಾರತದ ಮಾರುಕಟ್ಟೆಯು ಸ್ಕಾಚ್ ವಿಸ್ಕಿಗಳ ಪಾಲಿಗೆ ಪ್ರಮಾಣದ ಲೆಕ್ಕದಲ್ಲಿ ಈಗಾಗಲೇ ಅತಿದೊಡ್ಡದು. ಆದರೆ ಮೌಲ್ಯದ ಲೆಕ್ಕದಲ್ಲಿ ಭಾರತದ ಮಾರುಕಟ್ಟೆಯು ಮೊದಲ ಐದು ಮಾರುಕಟ್ಟೆಗಳ ಪೈಕಿ ಒಂದಾಗಿದೆ ಎಂದು ಕೆಂಟ್ ಹೇಳಿದ್ದಾರೆ.
ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಅನುಷ್ಠಾನಕ್ಕೆ ಬಂದ ನಂತರದಲ್ಲಿ, ಹಲವು ವಿಧದ ಸ್ಕಾಚ್ ವಿಸ್ಕಿಗಳು ಭಾರತಕ್ಕೆ ಬರಲಿವೆ. ಅದರಲ್ಲೂ ಮುಖ್ಯವಾಗಿ, ಸ್ಕಾಟ್ಲೆಂಡಿನ ಸಣ್ಣ ಕಂಪನಿಗಳ ಸ್ಕಾಚ್ ವಿಸ್ಕಿಗಳು ಕೂಡ ಭಾರತದಲ್ಲಿ ಲಭ್ಯವಾಗಲಿವೆ ಎಂದು ಮಾರ್ಕ್ ಕೆಂಟ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.