ADVERTISEMENT

Stock-Market | ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ನಿರೀಕ್ಷೆ: ಸೂಚ್ಯಂಕಗಳ ಏರಿಕೆ

ಪಿಟಿಐ
Published 19 ನವೆಂಬರ್ 2025, 15:43 IST
Last Updated 19 ನವೆಂಬರ್ 2025, 15:43 IST
ಸೂಚ್ಯಂಕ
ಸೂಚ್ಯಂಕ   

ಮುಂಬೈ: ಮಾಹಿತಿ ತಂತ್ರಜ್ಞಾನ ಮತ್ತು ಹಣಕಾಸು ವಲಯದ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರವ ವಹಿವಾಟಿನಲ್ಲಿ ಏರಿಕೆ ಕಂಡಿವೆ.

ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಡುವ ಭರವಸೆ ದೇಶೀಯ ಹೂಡಿಕೆದಾರರಲ್ಲಿ ಹೆಚ್ಚಳವಾಗಿದೆ. ಇದು ಸಹ ಸೂಚ್ಯಂಕಗಳ ಏರಿಕೆ ನೆರವಾಯಿತು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 513 ಅಂಶ ಏರಿಕೆಯಾಗಿ, 85,186ಕ್ಕೆ ವಹಿವಾಟು ಕೊನೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 142 ಅಂಶ ಹೆಚ್ಚಳವಾಗಿ, 26,052ಕ್ಕೆ ಅಂತ್ಯಗೊಂಡಿದೆ. 

ADVERTISEMENT

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.39ರಷ್ಟು ಇಳಿಕೆ ಆಗಿದೆ. ಪ್ರತೀ ಬ್ಯಾರಲ್ ಬೆಲೆ 64.64 ಡಾಲರ್ ಆಗಿದೆ.

ಚಿನ್ನ, ಬೆಳ್ಳಿ ದರ ಏರಿಕೆ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿಕೆ ಆಗಿದೆ.

10 ಗ್ರಾಂ ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ₹1,500 ಹೆಚ್ಚಳವಾಗಿ, ₹1,27,300ರಂತೆ ಮಾರಾಟವಾಗಿದೆ. ಆಭರಣ ಚಿನ್ನದ (ಶೇ 99.5ರಷ್ಟು ಪರಿಶುದ್ಧತೆ) ಬೆಲೆಯು ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿ, ₹1,26,700 ಆಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ ₹4 ಸಾವಿರ ಏರಿಕೆಯಾಗಿ, ₹1.60 ಲಕ್ಷವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.