ADVERTISEMENT

ಲಂಡನ್‌ನಲ್ಲಿ ನಡೆಯಲಿದೆ ವಿಜಯ್‌ ಮಲ್ಯ ಐಷಾರಾಮಿ ಕಾರುಗಳ ಹರಾಜು

ಏಜೆನ್ಸೀಸ್
Published 20 ಅಕ್ಟೋಬರ್ 2018, 4:31 IST
Last Updated 20 ಅಕ್ಟೋಬರ್ 2018, 4:31 IST
ವಿಜಯ್‌ ಮಲ್ಯ (ಸಾಂದರ್ಭಿಕ ಚಿತ್ರ)
ವಿಜಯ್‌ ಮಲ್ಯ (ಸಾಂದರ್ಭಿಕ ಚಿತ್ರ)   

ಲಂಡನ್‌: ಭಾರತದ 13ವಿವಿಧ ಬ್ಯಾಂಕ್‍ಗಳಿಗೆ ₹ 9,000 ಕೋಟಿ ಸಾಲ ಮರು ಪಾವತಿ ಮಾಡದೆ ವಿದೇಶಕ್ಕೆ ಪರಾರಿಯಾಗಿ ಉದ್ಯಮಿ ವಿಜಯ್‌ ಮಲ್ಯ ಅವರ ಐಷಾರಾಮಿ ಕಾರುಗಳನ್ನು ಹರಾಜು ಹಾಕಲು ಇಂಗ್ಲೆಂಡ್‌ ಹೈಕೋರ್ಟ್‌ನ ಜಾರಿ ಅಧಿಕಾರಿ ಸಿದ್ಧತೆ ನಡೆಸಿದ್ದಾರೆ.

ಹಿಂದೆ ಕೋರ್ಟ್‌ ನೀಡಿದಆದೇಶದಂತೆ ಐಷಾರಾಮಿ ಕಾರುಗಳ ಹರಾಜು ಪ್ರಕ್ರಿಯೆ ನಡೆಯುತ್ತಿರುವುದಾಗಿಭಾರತೀಯಬ್ಯಾಂಕ್‌ಗಳ ಕಾನೂನು ಪ್ರತಿನಿಧಿಗಳುಶುಕ್ರವಾರ ದೃಢಪಡಿಸಿದ್ದಾರೆ.

ಮಲ್ಯ ತಮ್ಮ ಕಾರುಗಳಿಗೆ ತಮ್ಮದೇ ಹೆಸರಿನಲ್ಲಿ ವಿಶೇಷವಾಗಿ ನೊಂದಣಿ ಮಾಡಿಸಿದ್ದಾರೆ. ವಿಜೆಎಂ (ವಿಜಯ್‌ ಮಲ್ಯ) ಸರಣಿಯ ದುಬಾರಿ ಕಾರುಗಳು ಇವಾಗಿವೆ.

ADVERTISEMENT

ಈ ಕಾರುಗಳನ್ನು 404,000 ಪೌಂಡ್‌(₹3.88 ಕೋಟಿ) ಗಳಿಗಿಂತ ಕಡಿಮೆ ಮೊತ್ತಕ್ಕೆ ಮಾರಾಟ ಮಾಡದಂತೆ ಕೋರ್ಟ್‌ ಸೂಚಿಸಿದೆ.

ಹರಾಜು ಹಾಕಲು ಸೂಚಿಸಿರುವ ಕಾರುಗಳು: 2016 ಮಿನಿ ಕಂಟ್ರಿಮ್ಯಾನ್‌ (ಎಡಿ16 1ಯುಎಕ್ಸ್‌), ಮೇಬ್ಯಾಕ್‌ 62(ವಿಜೆಎಂ1), 2006ರ ಫೆರಾರಿ ಎಫ್‌430 ಸ್ಪೈಡರ್‌ (ಬಿಂ55 ವಿಜೆಎಂ), 2014ರ ರೇಂಜ್‌ ರೋವರ್‌ (ಎಫ್‌ 1 ವಿಜೆಎಂ), ಫೆರಾರಿ ಎಫ್‌512ಎಂ (ಎಂ8ವಿಜಿಆರ್‌), ಪೋರ್ಶ್‌ಕೆಯೆನೆ(0007 ವಿಜೆಎಂ).

ಇದನ್ನು ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.