ADVERTISEMENT

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 9 ಪೈಸೆ ಇಳಿಕೆ

ಪಿಟಿಐ
Published 21 ಮೇ 2025, 5:27 IST
Last Updated 21 ಮೇ 2025, 5:27 IST
<div class="paragraphs"><p>ರೂಪಾಯಿ ಮೌಲ್ಯ</p></div>

ರೂಪಾಯಿ ಮೌಲ್ಯ

   

Credit: iStock Image

ಮುಂಬೈ: ಭಾರತ ಮತ್ತು ಪಾಕಿಸ್ತಾನದ ನಡುವೆ ತಲೆದೋರಿರುವ ಬಿಕ್ಕಟ್ಟು ಹಾಗೂ ವಿದೇಶಿ ಬಂಡವಾಳ ಹೊರಹರಿವಿನ ಒತ್ತಡದಿಂದಾಗಿ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಬುಧವಾರ ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಅಲ್ಪ ಕುಸಿತ ಕಂಡಿದೆ.

ADVERTISEMENT

ಅಮೆರಿಕದ ಡಾಲರ್‌ ಎದುರು 9 ಪೈಸೆ ಇಳಿಕೆಯಾಗಿದೆ. ಪ್ರತೀ ಡಾಲರ್‌ ಮೌಲ್ಯ ₹85.67 ಆಗಿದೆ.

ಮಂಗಳವಾರ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 16 ಪೈಸೆ ಕುಸಿದಿತ್ತು. ಪ್ರತೀ ಡಾಲರ್‌ ಮೌಲ್ಯ ₹85.58 ಆಗಿತ್ತು.

ಮತ್ತೊಂದೆಡೆ ಡಾಲರ್‌ ಸೂಚ್ಯಂಕ ಏರಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗಿದೆ. ಈ ಅಂಶಗಳು ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾಗಿವೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಭಾರತ–ಪಾಕ್‌ ನಡುವಿನ ಬಿಕ್ಕಟ್ಟು ಮುಂದುವರಿದರೆ ರೂಪಾಯಿಯು ಮತ್ತಷ್ಟು ಒತ್ತಡಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.