ADVERTISEMENT

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 24 ಪೈಸೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 5:02 IST
Last Updated 27 ಮಾರ್ಚ್ 2025, 5:02 IST
<div class="paragraphs"><p>ರೂಪಾಯಿ ಮೌಲ್ಯ</p></div>

ರೂಪಾಯಿ ಮೌಲ್ಯ

   

Credit: iStock Image

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಗುರುವಾರ ಆರಂಭಿಕ ವಹಿವಾಟಿನಲ್ಲಿ 24 ಪೈಸೆ ಇಳಿಕೆ ಆಗಿದೆ. ಪ್ರತೀ ಡಾಲರ್‌ ಮೌಲ್ಯ ₹85.93 ಆಗಿದೆ.

ADVERTISEMENT

ಕಳೆದ ಏಳು ವಹಿವಾಟಿನ ದಿನಗಳಲ್ಲಿ ರೂಪಾಯಿ ಮೌಲ್ಯ 154 ಪೈಸೆ ಏರಿಕೆ ಆಗಿತ್ತು. ದೇಶದ ಷೇರು ಸೂಚ್ಯಂಕಗಳ ಇಳಿಕೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಪೇಟೆಯಿಂದ ಬಂಡವಾಳ ಹಿಂಪಡೆಯುತ್ತಿರುವುದರಿಂದ ರೂಪಾಯಿ ಮೌಲ್ಯ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ತಿಂಗಳ ಅಂತ್ಯವಾಗಿರುವುದರಿಂದ ಪಾವತಿಗಾಗಿ ಆಮದುದಾರರು ಡಾಲರ್‌ ಖರೀದಿಸುತ್ತಿದ್ದಾರೆ. ಅಮೆರಿಕದ ಸುಂಕ ನೀತಿ ಜಾರಿಯು ಅನಿಶ್ಚಿತತೆಯಿಂದ ಕೂಡಿದೆ. ಇದರಿಂದ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಬಲಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.