ADVERTISEMENT

ಡಾಲರ್‌ ಎದುರು ರೂಪಾಯಿ ಮೌಲ್ಯ 22 ಪೈಸೆ ಏರಿಕೆ

ಪಿಟಿಐ
Published 3 ಮಾರ್ಚ್ 2021, 6:43 IST
Last Updated 3 ಮಾರ್ಚ್ 2021, 6:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಬುಧವಾರ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 22 ಪೈಸೆ ಹೆಚ್ಚಾಗಿದೆ. ಪ್ರತಿ ಒಂದು ಡಾಲರ್ ಗೆ ₹73.15ರಂತೆ ವಿನಿಮಯಗೊಂಡಿತು.

ಮಂಗಳವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 73.37 ರಷ್ಟಿತ್ತು. ಇತರೆ ಕರೆನ್ಸಿಗಳ ಎದುರು ಡಾಲರ್‌ ಮೌಲ್ಯ 0.01ರಷ್ಟು ಏರಿಕೆ ಕಂಡು 90.79ರಂತೆ ವಿನಿಮಯಗೊಂಡಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 0.41ರಷ್ಟು ಏರಿಕೆಯಾಗಿದ್ದು, ಒಂದು ಬ್ಯಾರಲ್‌ಗೆ 62.96 ಡಾಲರ್‌ಗೆ ಮಾರಾಟವಾಯಿತು.

ಏಷ್ಯಾದ ಇತರ ಕರೆನ್ಸಿಗಳು ದಿನದ ಆರಂಭಿಕ ವಹಿವಾಟಿನಲ್ಲಿ ಲಾಭದೊಂದಿಗೆ ವಿನಮಯಗೊಂಡಿವೆ ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ ಸಂಶೋಧನಾ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.