ನವದೆಹಲಿ: ದೇಶದ ಜನ ಉಳಿತಾಯ ಮಾಡುವಂತೆ ಹಾಗೂ ಉಳಿಸಿದ ಹಣವನ್ನು ಸಂಪತ್ತು ಸೃಷ್ಟಿಸುವ ಕಡೆಗಳಲ್ಲಿ ತೊಡಗಿಸುವಂತೆ ಕೋವಿಡ್–19 ಸೃಷ್ಟಿಸಿರುವ ಬಿಕ್ಕಟ್ಟು ಪ್ರೇರೇಪಿಸಿದೆ ಎಂದು ಸಮೀಕ್ಷೆಯೊಂದು ಹೇಳಿದೆ.
ಆರ್ಥಿಕತೆಯು ಚೇತರಿಸಿಕೊಳ್ಳುವ ಬಗ್ಗೆ ಶೇಕಡ 45ರಷ್ಟು ಜನ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕನಿಷ್ಠ ಒಂದು ವರ್ಷದವರೆಗೆ ಆರ್ಥಿಕ ಬೆಳವಣಿಗೆ ನಿಧಾನಗತಿಯಲ್ಲಿ ಸಾಗಲಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು ಹೇಳಿದ್ದಾರೆ. ಸಂಪತ್ತು ನಿರ್ವಹಣೆಯ ಸೇವೆಗಳನ್ನು ಒದಗಿಸುವ ಸ್ಕ್ರಿಪ್‌ಬಾಕ್ಸ್ ಕಂಪನಿ ‘ಫೈನಾನ್ಶಿಯಲ್ ಫ್ರೀಡಂ ಸರ್ವೆ’ ಹೆಸರಿನಲ್ಲಿ ಈ ಸಮೀಕ್ಷೆ ನಡೆಸಿದೆ.
ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುವುದರಿಂದ ವೈಯಕ್ತಿಕ ಹಣಕಾಸು ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ ಎನ್ನುವ ಅಭಿಪ್ರಾಯವು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.