ADVERTISEMENT

ವಿದೇಶಿ ವಿನಿಮಯ ಸಂಗ್ರಹ ಏರಿಕೆ

ಪಿಟಿಐ
Published 18 ಏಪ್ರಿಲ್ 2025, 13:54 IST
Last Updated 18 ಏಪ್ರಿಲ್ 2025, 13:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಏಪ್ರಿಲ್‌ 11ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹13,380 ಕೋಟಿ ಏರಿಕೆಯಾಗಿದೆ.

ಸತತ ಆರನೇ ವಾರವೂ ಸಂಗ್ರಹ ಏರಿಕೆಯಾಗಿದೆ. 2024ರ ಸೆಪ್ಟೆಂಬರ್‌ನಲ್ಲಿ ₹60.18 ಲಕ್ಷ ಕೋಟಿಯಷ್ಟಾಗಿತ್ತು. ಇದು ಸಾರ್ವಕಾಲಿಕ ಗರಿಷ್ಠವಾಗಿತ್ತು. ಸದ್ಯ ಒಟ್ಟು ಮೀಸಲು ಸಂಗ್ರಹ ₹57.87 ಲಕ್ಷ ಕೋಟಿಯಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ತಿಳಿಸಿದೆ. 

ವಿದೇಶಿ ಕರೆನ್ಸಿ ಸಂಗ್ರಹ ಮೌಲ್ಯವು ₹7,616 ಕೋಟಿ ಹೆಚ್ಚಳವಾಗಿದ್ದು, ಒಟ್ಟು ಸಂಗ್ರಹ ಪ್ರಮಾಣ ₹49 ಲಕ್ಷ ಕೋಟಿ ಆಗಿದೆ. ಚಿನ್ನದ ಮೀಸಲು ಸಂಗ್ರಹವು ₹5,447 ಕೋಟಿ ಹೆಚ್ಚಳವಾಗಿದೆ. ಸ್ಪೆಷಲ್‌ ಡ್ರಾಯಿಂಗ್‌ ರೈಟ್ಸ್‌ (ಎಸ್‌ಡಿಆರ್‌) ಮೀಸಲು ₹51 ಕೋಟಿ ಕಡಿಮೆಯಾಗಿದೆ. 

ADVERTISEMENT

ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್‌) ಭಾರತದ ಮೀಸಲು ಸಂಗ್ರಹವು ₹367 ಕೋಟಿ ಹೆಚ್ಚಳವಾಗಿದ್ದು, ಒಟ್ಟು ಸಂಗ್ರಹ ಮೊತ್ತ ₹38,441 ಕೋಟಿಗೆ ಮುಟ್ಟಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.