ADVERTISEMENT

ಮೇನಲ್ಲಿ ದೇಶಿ ಇಂಧನ ಬೇಡಿಕೆ ಶೇ 24ರಷ್ಟು ಹೆಚ್ಚಳ

ರಾಯಿಟರ್ಸ್
Published 11 ಜೂನ್ 2022, 11:05 IST
Last Updated 11 ಜೂನ್ 2022, 11:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದ ಇಂಧನ ಬೇಡಿಕೆಯು 2021ರ ಮೇ ತಿಂಗಳಿಗೆ ಹೋಲಿಸಿದರೆ 2022ರ ಮೇ ನಲ್ಲಿ ಶೇ 23.8ರಷ್ಟು ಏರಿಕೆ ಆಗಿದೆ.

ಪೆಟ್ರೋಲಿಯಂ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಘಟಕದ (ಪಿಪಿಎಸಿ) ಮಾಹಿತಿಯ ಪ್ರಕಾರ, ಮೇ ನಲ್ಲಿ ಇಂಧನ ಬೇಡಿಕೆಯು 1.82 ಕೋಟಿ ಟನ್‌ ಆಗಿದೆ. 2021ರ ಏಪ್ರಿಲ್‌ ನಂತರ ಕಂಡುಬಂದಿರುವ ಗರಿಷ್ಠ ಮಟ್ಟದ ಬೇಡಿಕೆ ಇದಾಗಿದೆ.

ಡೀಸೆಲ್‌ ಬಳಕೆಯು ಕಳೆದ ವರ್ಷದ ಮೇಗೆ ಹೋಲಿಸಿದರೆ ಈ ವರ್ಷದ ಮೇನಲ್ಲಿ ಶೇ 31.7ರಷ್ಟು ಹೆಚ್ಚಾಗಿದ್ದು, 72.9 ಲಕ್ಷ ಟನ್‌ಗೆ ತಲುಪಿದೆ. 2019ರ ಮೇಗೆ ಹೋಲಿಸಿದರೆ ಶೇ 32.6ರಷ್ಟ ಏರಿಕೆ ಆಗಿದೆ. ಪೆಟ್ರೋಲ್‌ ಬಳಕೆಯು ಶೇ 51.5ರಷ್ಟು ಹೆಚ್ಚಾಗಿ 30 ಲಕ್ಷ ಟನ್‌ಗೆ ತಲುಪಿದೆ.

ADVERTISEMENT

2021ರ ಮೇನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಇತ್ತು. ಇದರಿಂದಾಗಿ ಬೇಡಿಕೆಯು ತೀರಾ ಕಡಿಮೆ ಇತ್ತು. ಹೀಗಾಗಿ 2022ರ ಮೇ ತಿಂಗಳಲ್ಲಿನ ಬೇಡಿಕೆಯಲ್ಲಿ ಸಹಜವಾಗಿಯೇ ಏರಿಕೆ ಕಂಡಿದೆ ಎಂದು ರಿಫಿನಿಟಿವ್‌ ಕಂಪನಿಯ ವಿಶ್ಲೇಷಕ ಎಹಸಾನ್‌ ಉಲ್‌ ಹಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.