ನವದೆಹಲಿ: 2025–26ನೇ ಆರ್ಥಿಕ ವರ್ಷದಲ್ಲಿ ದೇಶದ ಸರಕು ಮತ್ತು ಸೇವೆಗಳ ರಫ್ತು ಮೌಲ್ಯವು 1 ಟ್ರಿಲಿಯನ್ ಡಾಲರ್‌ಗೆ (₹85 ಲಕ್ಷ ಕೋಟಿ) ತಲುಪುವ ನಿರೀಕ್ಷೆಯಿದೆ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟ (ಎಫ್‌ಐಇಒ) ಅಂದಾಜಿಸಿದೆ.
2024-25ನೇ ಆರ್ಥಿಕ ವರ್ಷದಲ್ಲಿ ಒಟ್ಟು ರಫ್ತು ಮೌಲ್ಯ ₹70.43 ಲಕ್ಷ ಕೋಟಿ ಆಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರಕುಗಳ ರಫ್ತು ಮೌಲ್ಯವು ₹45.67 ಲಕ್ಷ ಕೋಟಿ ಹಾಗೂ ಸೇವಾ ರಫ್ತು ಮೌಲ್ಯವು ₹40.55 ಲಕ್ಷ ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಎಫ್‌ಐಇಒ ಅಧ್ಯಕ್ಷ ಎಸ್.ಸಿ. ರಾಲ್ಹಾನ್ ಹೇಳಿದ್ದಾರೆ.
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮೆಷನರಿ, ರಾಸಾಯನಿಕಗಳು, ಔಷಧ, ಪೆಟ್ರೋಲಿಯಂ, ಜವಳಿ, ಹರಳು ಮತ್ತು ಚಿನ್ನಾಭರಣ, ಕೃಷಿ ವಲಯದ ರಫ್ತು ಪ್ರಮಾಣವು ಒಟ್ಟಾರೆ ರಫ್ತು ಮೌಲ್ಯದ ಏರಿಕೆಗೆ ನೆರವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.