ADVERTISEMENT

ದೇಶದ ಸೇವಾ ವಲಯದ ಚಟುವಟಿಕೆ: ಆರು ತಿಂಗಳ ಗರಿಷ್ಠ ಮಟ್ಟಕ್ಕೆ

ಪಿಟಿಐ
Published 5 ಫೆಬ್ರುವರಿ 2024, 16:19 IST
Last Updated 5 ಫೆಬ್ರುವರಿ 2024, 16:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಬೆಳವಣಿಗೆ ಸೂಚ್ಯಂಕವು ಜನವರಿಯಲ್ಲಿ ಆರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. 

2023ರ ಡಿಸೆಂಬರ್‌ನಲ್ಲಿ 59 ಇದ್ದ ಸೂಚ್ಯಂಕವು ಜನವರಿಯಲ್ಲಿ 61.8ಕ್ಕೆ ಹೆಚ್ಚಳವಾಗಿದೆ.

ದೇಶೀಯ ಹಾಗೂ ವಿದೇಶಗಳಲ್ಲಿ ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಜೊತೆಗೆ, ಕಂಪನಿಗಳಿಗೆ ಹೊಸ ವಹಿವಾಟು ಸಿಗುತ್ತಿರುವುದರಿಂದ ಏರಿಕೆ ಆಗಿದೆ ಎಂದು ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ನ (ಪಿಎಂಐ) ವರದಿ ಸೋಮವಾರ ತಿಳಿಸಿದೆ. 

ADVERTISEMENT

ಸೇವಾ ವಲಯದ 400 ಕಂಪನಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ. 

‘ಭವಿಷ್ಯದ ದಿನಗಳಲ್ಲಿ ಸೇವಾ ವಲಯದ ಚಟುವಟಿಕೆಗಳು ದೃಢಗೊಳ್ಳುವ ನಿರೀಕ್ಷೆಯಿದೆ. ಇದರಿಂದ ಹೊಸ ವಹಿವಾಟು ವಿಸ್ತರಣೆಯಾಗುತ್ತಿದೆ. ಹೊಸ ರಫ್ತು ವಹಿವಾಟು ವೇಗ ಪಡೆದಿದೆ. ಇದು ದೇಶದ ಸೇವಾ ರಫ್ತು ದೃಢವಾಗಿ ಉಳಿಯಲು ಸಹಕಾರಿಯಾಗಲಿದೆ’ ಎಂದು ಎಚ್‌ಎಸ್‌ಬಿಸಿಯ ಅರ್ಥಶಾಸ್ತ್ರಜ್ಞ ಇನೆಸ್ ಲ್ಯಾಮ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.