ADVERTISEMENT

ಸಕ್ಕರೆ ಉತ್ಪಾದನೆ ಶೇ 7.7 ಇಳಿಕೆ: ಎನ್‌ಎಫ್‌ಸಿಎಸ್‌ಎಫ್‌

ಮಹಾರಾಷ್ಟ್ರ–ಕರ್ನಾಟಕದಲ್ಲಿ ಉತ್ಪಾದನೆ ಕುಸಿತ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 15:45 IST
Last Updated 2 ಜನವರಿ 2024, 15:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2023–24ನೇ ಸಾಲಿನ ಸಕ್ಕರೆ ಮಾರುಕಟ್ಟೆ ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ (ಅಕ್ಟೋಬರ್‌–ಡಿಸೆಂಬರ್‌) ದೇಶದಲ್ಲಿ ಸಕ್ಕರೆ ಉತ್ಪಾದನೆಯು ಶೇ 7.7ರಷ್ಟು ಇಳಿಕೆಯಾಗಿ, 112 ಲಕ್ಷ ಟನ್‌ಗೆ ತಲುಪಿದೆ ಎಂದು ಸಹಕಾರಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಸಿಎಸ್‌ಎಫ್‌) ತಿಳಿಸಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆ ಕಡಿಮೆಯಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಿದೆ.

2022-23ರ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಉತ್ಪಾದನೆಯು 121.35 ಲಕ್ಷ ಟನ್‌ ಇತ್ತು.

ADVERTISEMENT

2023-24ರ ಋತುವಿನಲ್ಲಿ ದೇಶದ ಒಟ್ಟು ಸಕ್ಕರೆ ಉತ್ಪಾದನೆಯು 305 ಲಕ್ಷ ಟನ್‌ ಆಗಲಿದೆ ಎಂದು ಒಕ್ಕೂಟವು ಅಂದಾಜಿಸಿದೆ.  

ಕಳೆದ ಡಿಸೆಂಬರ್‌ವರೆಗೆ ದೇಶದಲ್ಲಿ ಒಟ್ಟು 511 ಕಾರ್ಖಾನೆಗಳು 1,223 ಲಕ್ಷ ಟನ್‌ನಷ್ಟು ಕಬ್ಬನ್ನು ಅರೆದಿವೆ ಎಂದು ಹೇಳಿದೆ.  

ಮಹಾರಾಷ್ಟ್ರದಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ 38.20 ಲಕ್ಷ ಟನ್‌ನಷ್ಟು ಸಕ್ಕರೆ ಉತ್ಪಾದನೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 47.40 ಲಕ್ಷ ಟನ್ ಆಗಿತ್ತು. ಕರ್ನಾಟಕದಲ್ಲಿ 26.70 ಲಕ್ಷ ಟನ್‌ ಉತ್ಪಾದನೆಯಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 24 ಲಕ್ಷ ಟನ್‌ ಉತ್ಪಾದನೆಯಾಗಿತ್ತು. ಆದರೆ, ಉತ್ತರ ಪ್ರದೇಶದಲ್ಲಿ ಮಾತ್ರ ಉತ್ಪಾದನೆಯು 30.80 ಲಕ್ಷ ಟನ್‌ನಿಂದ 34.65 ಲಕ್ಷ ಟನ್‌ಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.