ADVERTISEMENT

ಸೇವಾ ವಲಯ ಪ್ರಗತಿ: ನವೆಂಬರ್‌ನಲ್ಲಿ ಅಲ್ಪ ಇಳಿಕೆ

ಪಿಟಿಐ
Published 4 ಡಿಸೆಂಬರ್ 2024, 14:34 IST
Last Updated 4 ಡಿಸೆಂಬರ್ 2024, 14:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಬೆಳವಣಿಗೆಯು ನವೆಂಬರ್‌ ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ವರದಿ ಬುಧವಾರ ತಿಳಿಸಿದೆ.

ಸೇವಾ ವಲಯದ ಚಟುವಟಿಕೆಗಳನ್ನು ಸೂಚಿಸುವ ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್‌ ಬ್ಯುಸಿನೆಸ್‌ ಸೂಚ್ಯಂಕವು, ಅಕ್ಟೋಬರ್‌ನಲ್ಲಿ 58.5 ದಾಖಲಾಗಿತ್ತು. ನವೆಂಬರ್‌ನಲ್ಲಿ 58.4ಕ್ಕೆ ಇಳಿದಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ 56.9 ದಾಖಲಾಗಿತ್ತು ಎಂದು ತಿಳಿಸಿದೆ.

‘ಸೇವಾ ವಲಯದ ಬೆಳವಣಿಗೆಯು ಅಕ್ಟೋಬರ್‌ಗೆ ಹೋಲಿಸಿದರೆ, ಕಳೆದ ತಿಂಗಳು ಸ್ವಲ್ಪ ಇಳಿಕೆಯಾಗಿದೆ. ಆದರೆ, ಈ ವಲಯದಲ್ಲಿನ ನೇಮಕಾತಿಯು ನವೆಂಬರ್‌ನಲ್ಲಿ ಹೆಚ್ಚಿದೆ’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್‌ ಭಂಡಾರಿ ಹೇಳಿದ್ದಾರೆ.

ADVERTISEMENT

ನೇಮಕಾತಿ ಹೆಚ್ಚಳವು ಹೊಸ ಆರ್ಡರ್‌ಗಳು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿನ ಹೆಚ್ಚಿದ ಬೇಡಿಕೆಗೆ ಕನ್ನಡಿ ಹಿಡಿದಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.