ADVERTISEMENT

ಮಾರ್ಚ್‌ನಲ್ಲಿ ತುಸು ತಗ್ಗಿದ ಸೇವಾ ವಲಯ

ಪಿಟಿಐ
Published 5 ಏಪ್ರಿಲ್ 2023, 11:13 IST
Last Updated 5 ಏಪ್ರಿಲ್ 2023, 11:13 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಮಾರ್ಚ್‌ ತಿಂಗಳಲ್ಲಿ ದೇಶದ ಸೇವಾ ವಲಯದ ಚಟುವಟಿಕೆಗಳು ತುಸು ಕಡಿಮೆ ಆಗಿವೆ. ಫೆಬ್ರುವರಿಯಲ್ಲಿ ಸೇವಾ ವಲಯದ ಚಟುವಟಿಕೆಗಳು 12 ತಿಂಗಳ ಗರಿಷ್ಠ ಮಟ್ಟ ತಲುಪಿದ್ದವು.

ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಸರ್ವಿಸಸ್‌ ಪಿಎಂಐ ವಾಣಿಜ್ಯ ಚಟುವಟಿಕೆಗಳ ಸೂಚ್ಯಂಕವು ಫೆಬ್ರುವರಿಯಲ್ಲಿ 59.4ರಷ್ಟು ಇದ್ದಿದ್ದು, ಮಾರ್ಚ್‌ನಲ್ಲಿ 57.8ಕ್ಕೆ ಇಳಿಕೆ ಕಂಡಿದೆ. ಅಂದರೆ ವಲಯದ ಬೆಳವಣಿಗೆಯ ಪ್ರಮಾಣವು ತುಸು ತಗ್ಗಿದೆ.

ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು, 50ಕ್ಕಿಂತ ಕಡಿಮೆ ಮಟ್ಟದಲ್ಲಿದ್ದರೆ ಅದನ್ನು ಕುಸಿತವೆಂದು ಭಾವಿಸಲಾಗುತ್ತದೆ.

ADVERTISEMENT

ಚಟುವಟಿಕೆಗಳಲ್ಲಿ ಸತತ ಹತ್ತು ತಿಂಗಳುಗಳಿಂದ ಏರಿಕೆ ಇದ್ದರೂ, ವಲಯದಲ್ಲಿನ ಉದ್ಯೋಗ ಸೃಷ್ಟಿಯು ಮಾರ್ಚ್‌ನಲ್ಲಿ ಅಲ್ಪ ಮಟ್ಟದಲ್ಲಿ ಮಾತ್ರ ಹೆಚ್ಚಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಹೆಚ್ಚಿನ ಕಂಪನಿಗಳು ಮಾರ್ಚ್‌ನಲ್ಲಿ ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿಲ್ಲ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್‌ ಸಂಸ್ಥೆಯ ವರದಿಯು ಹೇಳಿದೆ.

ತಯಾರಿಕಾ ವಲಯ ಹಾಗೂ ಸೇವಾ ವಲಯದ ಚಟುವಟಿಕೆಗಳನ್ನು ಒಟ್ಟಾಗಿ ಪ್ರತಿನಿಧಿಸುವ ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಕಾಂಪೊಸಿಟ್ ಪಿಎಂಐ ಔಟ್‌ಪುಟ್‌ ಸೂಚ್ಯಂಕವು ಫೆಬ್ರುವರಿಯಲ್ಲಿ 59ರ ಮಟ್ಟದಲ್ಲಿ ಇದ್ದಿದ್ದು, ಮಾರ್ಚ್‌ನಲ್ಲಿ 58.4ಕ್ಕೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.