ADVERTISEMENT

ವಾರದಲ್ಲಿ ಕನಿಷ್ಠ 3 ದಿನ ಕಚೇರಿಯಿಂದ ಕೆಲಸ: ವಿಪ್ರೊ

ರಾಯಿಟರ್ಸ್‌
Published 7 ನವೆಂಬರ್ 2023, 11:38 IST
Last Updated 7 ನವೆಂಬರ್ 2023, 11:38 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ವಿಪ್ರೊ ಕಂಪನಿಯು ನವೆಂಬರ್ 15ರಿಂದ ಜಾರಿಗೆ ಬರುವಂತೆ ವಾರದಲ್ಲಿ ಕನಿಷ್ಠ ಮೂರು ದಿನ ಕಚೇರಿಯಿಂದ ಕೆಲಸ ಮಾಡುವುದನ್ನು ತನ್ನೆಲ್ಲಾ ಉದ್ಯೋಗಿಗಳಿಗೆ ಕಡ್ಡಾಯ ಮಾಡಿದೆ. ಕಂಪನಿಯು ಉದ್ಯೋಗಿಗಳಿಗೆ ಕಳುಹಿಸಿರುವ ಇ–ಮೇಲ್‌ನಲ್ಲಿ ಈ ಸೂಚನೆ ನೀಡಿರುವುದಾಗಿ ರಾಯಿಟರ್ಸ್‌ ತಿಳಿಸಿದೆ. 

ಕಂಪನಿಯು ಮೇ ತಿಂಗಳಿನಿಂದಲೇ ಉದ್ಯೋಗಿಗಳಿಗೆ ಕಚೇರಿಯಿಂದ ಕೆಲಸ ಮಾಡುವಂತೆ ಸೂಚನೆ ನೀಡುತ್ತಿದೆ. ಒಟ್ಟು ಸಿಬ್ಬಂದಿಯಲ್ಲಿ ಸದ್ಯ ಶೇ 55ರಷ್ಟು ಕೆಲಸಗಾರರು ಕಚೇರಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಕಂಪನಿಯು ವಕ್ತಾರರೊಬ್ಬರು ತಿಳಿಸಿದ್ದಾರೆ. ಸೆಪ್ಟೆಂಬರ್ 30ರ ಅಂತ್ಯಕ್ಕೆ ಕಂಪನಿಯಲ್ಲಿ ಒಟ್ಟು 2.4 ಲಕ್ಷ ಸಿಬ್ಬಂದಿ ಇದ್ದಾರೆ.

ಕೋವಿಡ್‌ ಸಾಂಕ್ರಾಮಿಕದ ನಿರ್ಬಂಧಗಳು ತೆರವಾದ ಬಳಿಕ ಹಲವು ಕಂಪನಿಗಳು ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯನ್ನು ಕೈಬಿಡುತ್ತಿವೆ. ತಿಂಗಳಲ್ಲಿ ಕನಿಷ್ಠ 10 ದಿನ ಕಚೇರಿಯಿಂದ ಕೆಲಸ ಮಾಡುವಂತೆ ಇನ್ಫೊಸಿಸ್ ಕಂಪನಿಯು ಕಳೆದ ವಾರ ತನ್ನ ಸಿಬ್ಬಂದಿಗೆ ಸೂಚನೆ ನೀಡಿದೆ. ವಾರದಲ್ಲಿ ಐದು ದಿನ ಕಚೇರಿಯಿಂದ ಕೆಲಸ ಮಾಡುವಂತೆ ಟಿಸಿಎಸ್‌ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.