ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಯು ಏಪ್ರಿಲ್ ತಿಂಗಳಲ್ಲಿ ಸದೃಢಗೊಂಡಿದೆ ಎಂದು ಎಸ್ ಆ್ಯಂಡ್ ಪಿ ಮಾಸಿಕ ಸಮೀಕ್ಷೆ ವರದಿ ಮಂಗಳವಾರ ತಿಳಿಸಿದೆ.
ಮಾರ್ಚ್‌ನಲ್ಲಿ ಸೂಚ್ಯಂಕವು 58.5 ಇತ್ತು. ಏಪ್ರಿಲ್‌ನಲ್ಲಿ 58.7 ದಾಖಲಾಗಿದೆ. ಹೊಸ ಆರ್ಡರ್‌ಗಳ ಪ್ರಮಾಣ ಹೆಚ್ಚಿದೆ. ಇದು ದೇಶದ ಸೇವಾ ವಲಯಕ್ಕೆ ಉತ್ತೇಜನ ನೀಡಿದೆ. ಇದರಿಂದ ಸೂಚ್ಯಂಕವು ಏರಿಕೆ ಕಂಡಿದೆ ಎಂದು ತಿಳಿಸಿದೆ.
‘ವಿದೇಶಗಳಿಂದ ಹೆಚ್ಚಿದ ಬೇಡಿಕೆಯಿಂದ ದೇಶದ ಸೇವಾ ವಲಯದ ಕಂಪನಿಗಳ ಚಟುವಟಿಕೆ ಏರಿಕೆ ದಾಖಲಿಸಿದೆ. ಏಷ್ಯಾ, ಯುರೋಪ್, ಪಶ್ಚಿಮ ಏಷ್ಯಾ ಮತ್ತು ಅಮೆರಿಕದಿಂದ ಬೇಡಿಕೆ ಹೆಚ್ಚಿದೆ’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್ ಭಂಡಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.