ADVERTISEMENT

ಜೂನ್‌ನಲ್ಲಿ ಕೈಗಾರಿಕಾ ಉತ್ಪಾದನೆ ಶೇ 13.6ರಷ್ಟು ಬೆಳವಣಿಗೆ

ಪಿಟಿಐ
Published 12 ಆಗಸ್ಟ್ 2021, 12:48 IST
Last Updated 12 ಆಗಸ್ಟ್ 2021, 12:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಕೈಗಾರಿಕಾ ವಲಯದ ಉತ್ಪಾದನೆಯು ಜೂನ್‌ನಲ್ಲಿ ಶೇ 13.6ರಷ್ಟು ಬೆಳವಣಿಗೆ ಕಂಡಿದೆ ಎಂದು ಕೇಂದ್ರ ಸರ್ಕಾರವು ಗುರುವಾರ ಮಾಹಿತಿ ನೀಡಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ಈ ವಲಯದ ಬೆಳವಣಿಗೆಯು 2020ರ ಜೂನ್‌ನಲ್ಲಿ ಶೇ 16.6ರಷ್ಟು ಇಳಿಕೆ ಕಂಡಿತ್ತು.

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಗುರುವಾರ ಬಿಡುಗಡೆ ಮಾಡಿದ ಐಐಪಿ ಮಾಹಿತಿ ಪ್ರಕಾರ, ತಯಾರಿಕಾ ವಲಯದ ಉತ್ಪಾದನೆಯು ಶೇ 13ರಷ್ಟು ಹೆಚ್ಚಾಗಿದೆ. ಗಣಿಗಾರಿಕೆಯ ಉತ್ಪಾದನೆಯು ಶೇ 23.1ರಷ್ಟು, ವಿದ್ಯುತ್‌ ಉತ್ಪಾದನೆಯು ಶೇ 8.3ರಷ್ಟು ಏರಿಕೆ ಕಂಡಿದೆ.

ADVERTISEMENT

ಏಪ್ರಿಲ್‌–ಜೂನ್‌ ಅವಧಿಯಲ್ಲಿ ಐಐಪಿಯು ಶೇ 45ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 35.6ರಷ್ಟು ಇಳಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.