ADVERTISEMENT

ಕೈಗಾರಿಕಾ ಪ್ರಗತಿ 4 ತಿಂಗಳ ಕನಿಷ್ಠ

ಪಿಟಿಐ
Published 9 ಆಗಸ್ಟ್ 2019, 18:18 IST
Last Updated 9 ಆಗಸ್ಟ್ 2019, 18:18 IST

ನವದೆಹಲಿ: ದೇಶದ ಕೈಗಾರಿಕಾ ವಲಯದ ಪ್ರಗತಿಯು ಜೂನ್‌ನಲ್ಲಿ ಶೇ 2ರಷ್ಟಾಗಿದ್ದು,ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ಗಣಿಗಾರಿಕೆ ಮತ್ತು ತಯಾರಿಕಾ ವಲಯದ ಪ್ರಗತಿಯು ಮಂದಗತಿಯಲ್ಲಿದೆ. ಇದರಿಂದ ಒಟ್ಟಾರೆ ಪ್ರಗತಿಯ ಮೇಲೆ ಪರಿಣಾಮ ಬೀರಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮಾಹಿತಿ ನೀಡಿದೆ.

ಕೈಗಾರಿಕಾ ತಯಾರಿಕಾ ಸೂಚ್ಯಂಕದ (ಐಐಪಿ) ಮೇಲೆ ಲೆಕ್ಕಹಾಕುವ ಕೈಗಾರಿಕಾ ಪ್ರಗತಿಯು 2018ರ ಜೂನ್‌ನಲ್ಲಿ ಶೇ 7ರಷ್ಟಿತ್ತು.2019ರ ಮೇನಲ್ಲಿ ಶೇ 4.6ರಷ್ಟಿತ್ತು. ಇದಕ್ಕೆ ಹೋಲಿಸಿದರೂ ಶೇ 2.6ರಷ್ಟು ಇಳಿಕೆಯಾಗಿದೆ.

ADVERTISEMENT

ಒಟ್ಟಾರೆ 23 ಕೈಗಾರಿಕೆಗಳಲ್ಲಿ 8 ಕೈಗಾರಿಕೆಗಳು ಮಾತ್ರವೇ ಜೂನ್‌ನಲ್ಲಿ ಸಕಾರಾತ್ಮಕ ಪ್ರಗತಿ ಕಂಡಿವೆ.ಏಪ್ರಿಲ್‌–ಜೂನ್‌ ಅವಧಿಯಲ್ಲಿಯೂ ಶೇ 5.1 ರಿಂದ ಶೇ 3.6ಕ್ಕೆ ಇಳಿಕೆ ಕಂಡಿದೆ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.