ಬೆಂಗಳೂರು: ಪ್ರೀಮಿಯಂ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಿರುವ ಇನ್ಫಿನಿಕ್ಸ್ ಸಂಸ್ಥೆಯು, ಹಾಟ್ 8 (HOT 8) ಹೆಸರಿನ ಹೊಸ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
4 ಜಿಬಿ ರ್ಯಾಮ್ ಮತ್ತು 64 ಜಿಬಿ ರೋಮ್ ಒಳಗೊಂಡಿರುವ ಈ ಸ್ಮಾರ್ಟ್ಫೋನ್ 6.52 ಇಂಚಿನ ದೊಡ್ಡ ಹೈಡೆಫನಿಷನ್ ಸ್ಕ್ರೀನ್ ಹಾಗೂ 5000 ಎಂಎಎಚ್ ಬ್ಯಾಟರಿ ಹೊಂದಿದೆ.
13 ಎಂಪಿ 3 ಹಿಂಬದಿ ಕ್ಯಾಮೆರಾ ಮತ್ತು 8 ಎಂಪಿಯ ಮುಂಭಾಗದ ಕ್ಯಾಮೆರಾ ಜತೆಗೆ ಎಲ್ಇಡಿ ಫ್ಲ್ಯಾಷ್ ಒಳಗೊಂಡಿದೆ.ಈ ಹೊಸ ಸ್ಮಾರ್ಟ್ಫೋನ್ ಮೂಲಬೆಲೆ ₹ 7,999 ಇದೆ. ಆರಂಭಿಕ ಕೊಡುಗೆಯಾಗಿಅಕ್ಟೋಬರ್ 30ರವರೆಗೆ ವಿಶೇಷ ದರದಲ್ಲಿ ₹ 6,999 ಖರೀದಿಸಬಹುದು. ಎರಡು ಆಕರ್ಷಕ ಬಣ್ಣಗಳಲ್ಲಿ ಇದು ಲಭ್ಯ ಇದೆ.
‘ಹಲವಾರು ಹೊಸ ಸೌಲಭ್ಯಗಳನ್ನು ಒಳಗೊಂಡಿರುವ ಈ ವಿಶಿಷ್ಟ ಸ್ಮಾರ್ಟ್ಫೋನ್ ಅನ್ನು ಕೈಗೆಟುಕುವದರದಲ್ಲಿ ಬಿಡುಗಡೆ ಮಾಡಲಾಗಿದೆ’ ಎಂದು ಇನ್ಫಿನಿಕ್ಸ್ ಇಂಡಿಯಾ ಸಂಸ್ಥೆಯ ಸಿಇಒ ಅನಿಶ್ ಕಪೂರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.