ADVERTISEMENT

ಜಿಎಸ್‌ಟಿ: ತೆರಿಗೆ ಹಂತ ಬದಲಾವಣೆ ಸದ್ಯಕ್ಕಿಲ್ಲ

ಪಿಟಿಐ
Published 25 ಮೇ 2022, 14:08 IST
Last Updated 25 ಮೇ 2022, 14:08 IST

ನವದೆಹಲಿ: ಹಣದುಬ್ಬರ ಪ್ರಮಾಣವು ಹೆಚ್ಚಿರುವ ಕಾರಣದಿಂದಾಗಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ತೆರಿಗೆ ಹಂತಗಳನ್ನು ಕಡಿಮೆ ಮಾಡುವ ಕಾರ್ಯ ತಕ್ಷಣಕ್ಕೆ ಆಗಲಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

ಜಿಎಸ್‌ಟಿ ಅಡಿಯಲ್ಲಿ ಈಗ ನಾಲ್ಕು ಹಂತಗಳಲ್ಲಿ ತೆರಿಗೆ ನಿಗದಿ ಮಾಡಲಾಗಿದೆ. ನಾಲ್ಕು ಹಂತಗಳನ್ನು ಕಡಿಮೆ ಮಾಡುವ ಆಲೋಚನೆ ಇತ್ತು. ಹೀಗೆ ಮಾಡುವುದರಿಂದ ಕೆಲವು ವಸ್ತುಗಳಿಗೆ ಈಗಿರುವುದಕ್ಕಿಂತ ಹೆಚ್ಚಿನ ತೆರಿಗೆ, ಇನ್ನು ಕೆಲವಕ್ಕೆ ಈಗಿರುವುದಕ್ಕಿಂತ ಕಡಿಮೆ ತೆರಿಗೆ ವಿಧಿಸಬೇಕಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT