ADVERTISEMENT

ವೇರಿಯೆಬಲ್ ಪೇ ತಗ್ಗಿಸಿದ ಇನ್ಫೊಸಿಸ್

ಪಿಟಿಐ
Published 22 ಆಗಸ್ಟ್ 2022, 16:05 IST
Last Updated 22 ಆಗಸ್ಟ್ 2022, 16:05 IST
   

ನವದೆಹಲಿ (ಪಿಟಿಐ): ದೇಶದ ಎರಡನೆಯ ಅತಿದೊಡ್ಡ ಐ.ಟಿ. ಸೇವಾ ಕಂಪನಿ ಇನ್ಫೊಸಿಸ್ ತನ್ನ ನೌಕರರಿಗೆ ನೀಡುವ ವೇರಿಯೇಬಲ್ ಪೇ ಪ್ರಮಾಣವನ್ನು ಸರಾಸರಿ ಶೇಕಡ 70ಕ್ಕೆ ತಗ್ಗಿಸಿದೆ. ಇದು ಜೂನ್ ತ್ರೈಮಾಸಿಕಕ್ಕೆ ಅನ್ವಯವಾಗಲಿದೆ.

ಕಂಪನಿಯ ಲಾಭಾಂಶವು ನಿರೀಕ್ಷೆಯಷ್ಟು ಹೆಚ್ಚಾಗದಿರುವುದು ಹಾಗೂ ನೌಕರರ ಮೇಲಿನ ವೆಚ್ಚಗಳು ಜಾಸ್ತಿ ಆಗಿರುವುದು ಈ ತೀರ್ಮಾನಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಮೂಲದ ಇನ್ನೊಂದು ಪ್ರಮುಖ ಐ.ಟಿ. ಸೇವಾ ಕಂಪನಿ ವಿಪ್ರೊ ಕೂಡ ಈಚೆಗೆ ತನ್ನ ನೌಕರರಿಗೆ ನೀಡುವ ವೇರಿಯೆಬಲ್ ಪೇ ಕಡಿತಗೊಳಿಸಿತ್ತು. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ಕಂಪನಿಯು ತನ್ನ ಕೆಲವು ನೌಕರರಿಗೆ ತ್ರೈಮಾಸಿಕ ವೇರಿಯೆಬಲ್ ಪೇ ಪಾವತಿಯನ್ನು ಒಂದು ತಿಂಗಳ ಮಟ್ಟಿಗೆ ಮುಂದೂಡಿದೆ ಎನ್ನಲಾಗಿದೆ.

ADVERTISEMENT

ಇನ್ಫೊಸಿಸ್‌ ಕಂಪನಿಯು ತನ್ನ ತೀರ್ಮಾನವನ್ನು ನೌಕರರಿಗೆ ತಿಳಿಸಿದೆ. ಈ ಕುರಿತು ಪ್ರತಿಕ್ರಿಯೆ ಕೋರಿ ಇನ್ಫೊಸಿಸ್‌ಗೆ ಇ–ಮೇಲ್ ಕಳುಹಿಸಲಾಗಿದ್ದು, ಉತ್ತರ ದೊರೆತಿಲ್ಲ. ಇನ್ಫೊಸಿಸ್‌ನ ಜೂನ್‌ ತ್ರೈಮಾಸಿಕದ ಲಾಭವು ನಿರೀಕ್ಷೆಗಿಂತ ಕಡಿಮೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.