ADVERTISEMENT

ಮಹೀಂದ್ರಾ ಇನ್ಶುರೆನ್ಸ್ ಬ್ರೋಕರ್ಸ್ ಜತೆ ಎಸ್‍ಬಿಐ ಜನರಲ್ ಇನ್ಶುರೆನ್ಸ್ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 6:26 IST
Last Updated 13 ಡಿಸೆಂಬರ್ 2020, 6:26 IST
-
-   

ಬೆಂಗಳೂರು: ಎರಡು ಮತ್ತು ಮೂರನೇ ಹಂತದ ನಗರ – ಪಟ್ಟಣಗಳಿಗೆ ವಿಮೆ ಸೌಲಭ್ಯ ವಿಸ್ತರಿಸಲು, ಎಸ್‍ಬಿಐ ಜನರಲ್ ಇನ್ಶುರೆನ್ಸ್, ಮಹೀಂದ್ರಾ ಇನ್ಶುರೆನ್ಸ್ ಬ್ರೋಕರ್ಸ್ ಲಿಮಿಟೆಡ್ (ಎಂಐಬಿಎಲ್) ಜೊತೆ ಒಪ್ಪಂದ ಮಾಡಿಕೊಂಡಿದೆ.

ಗ್ರಾಮೀಣ ಪ್ರದೇಶಗಳಲ್ಲಿ ವಿಮೆ ಸೌಲಭ್ಯ ವಿಸ್ತರಿಸಲು ಈ ಪಾಲುದಾರಿಕೆಯು ಗಮನಾರ್ಹ ಕೊಡುಗೆ ನೀಡಲಿದೆ. ಕಾರ್‌, ವಾಣಿಜ್ಯ ವಾಹನ, ಟ್ರ್ಯಾಕ್ಟರ್‌, ಬಳಸಿದ ಕಾರ್ ಹಾಗೂ ವಾಹನಗಳ ವಿಮೆಗೂ ‘ಎಂಐಬಿಎಲ್‌‘ ಜತೆಗಿನ ಈ ಪಾಲುದಾರಿಕೆ ನೆರವಾಗಲಿದೆ. ಕೈಗೆಟುಕುವ ದರದಲ್ಲಿ ಡಿಜಿಟಲ್‌ ವಿಧಾನದಲ್ಲಿ ವಿಮೆ ಸೌಲಭ್ಯ ಒದಗಿಸಲು ಇದರಿಂದ ಸಾಧ್ಯವಾಗಲಿದೆ ಎಂದು ’ಎಂಐಬಿಎಲ್‌‘ನ ವ್ಯವಸ್ಥಾಪಕ ನಿರ್ದೇಶಕ ಡಾ. ಜೈದೀಪ್‌ ಡಿ ಅವರು ಹೇಳಿದ್ದಾರೆ.

'ಕೋವಿಡ್‌–19‘ ಪಿಡುಗಿನಿಂದಾಗಿ ಆರೋಗ್ಯ ವಿಮೆ ಕುರಿತು ಜನರಲ್ಲಿ ಹೆಚ್ಚಿನ ಅರಿವು ಮೂಡಿದೆ. ಮಧ್ಯಮ ವರ್ಗದ ಜನರನ್ನು ತಲುಪುವುದು ಮತ್ತು ಅವರಿಗೆ ವಿಮೆ ಒದಗಿಸುವುದು ನಮ್ಮ ಸದ್ಯದ ಅತ್ಯಂತ ಪ್ರಮುಖ ಅಗತ್ಯವಾಗಿದೆ. ಈ ಕಾರಣಕ್ಕೆ
2 ಮತ್ತು 3 ನೇ ಹಂತದ ಪಟ್ಟಣ ಹಾಗೂ ನಗರಗಳ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಈ ಒಪ್ಪಂದ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯ ವಿಮೆ ಕುರಿತು ಅರಿವು ಮೂಡಿಸುವಲ್ಲಿಯೂ ಈ ಒಪ್ಪಂದವು ನೆರವಾಗಲಿದೆ. ಇದರಿಂದ ಹೆಚ್ಚು ಜನರು ಆರೋಗ್ಯ ವಿಮೆ ಪಡೆಯುತ್ತಾರೆ ಎಂಬ ಭರವಸೆ ನಮಗೆ ಇದೆ’ ಎಂದು ಎಸ್‍ಬಿಐ ಜನರಲ್ ಇನ್ಶುರೆನ್ಸ್‌ನ ಸಿಇಒ ಪಿ. ಸಿ. ಕಂದ್ಪಾಲ್‌ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.