ADVERTISEMENT

‘ಭಾರತದಲ್ಲಿ ಐಫೋನ್‌ ಮಾರಾಟ ತಗ್ಗಲಿದೆ’

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 18:08 IST
Last Updated 3 ನವೆಂಬರ್ 2018, 18:08 IST
   

ಬೆಂಗಳೂರು: ನಾಲ್ಕು ವರ್ಷಗಳ ಬಳಿಕ ಭಾರತದಲ್ಲಿ ಆ್ಯಪಲ್‌ ಕಂಪನಿಯ ಐಫೋನ್‌ ಮಾರಾಟದಲ್ಲಿ ಇಳಿಕೆ ಕಾಣಲಿದೆ ಎಂದು ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಟ್‌ ಹೇಳಿದೆ.

ಕ್ಯಾಲೆಂಡರ್ ವರ್ಷದ ಮೂರನೇ ತ್ರೈಮಾಸಿಕದಲ್ಲಿ 7 ರಿಂದ 8 ಲಕ್ಷ ಐಫೋನ್‌ ಮಾರಾಟ ಮಾರಾಟವಾಗಿವೆ. ಆದರೆ, ಹಿಂದಿನ ವರ್ಷ ಇದೇ ಅವಧಿಯಲ್ಲಿ 10 ಲಕ್ಷ ಫೋನ್‌ಗಳು ಮಾರಾಟವಾಗಿದ್ದವು. 2018ನೇ ಕ್ಯಾಲೆಂಡರ್ ವರ್ಷಕ್ಕೆ 20 ಲಕ್ಷದಿಂದ 23 ಲಕ್ಷ ಐಫೋನ್‌ ಮಾರಾಟವಾಗಲಿವೆ. 2017ಕ್ಕೆ ಹೋಲಿಸಿದರೆ 10 ಲಕ್ಷ ಕಡಿಮೆಯಾಗಲಿದೆ ಎಂದು ತಿಳಿಸಿದೆ.

‘ಹೊಸ ಸ್ಮಾರ್ಟ್‌ಫೋನ್‌ಗಳು ದುಬಾರಿಯಾಗಿವೆ. ಹಳೆಯ ಐಫೋನ್‌ಗಳಿಗೆ ಹೆಚ್ಚಿನ ವಿನಾಯ್ತಿಯನ್ನು ನೀಡುತ್ತಿಲ್ಲ. ಹೀಗಾಗಿಮಾರಾಟದಲ್ಲಿ ಇಳಿಕೆ ಕಾಣುತ್ತಿದೆ’ ಎಂದುಸಂಸ್ಥೆಯ ಸಂಶೋದನಾ ನಿರ್ದೇಶಕ ನೀಲ್ ಶಾ ತಿಳಿಸಿದ್ದಾರೆ.

ADVERTISEMENT

‘ದೇಶದಲ್ಲಿ ಆ್ಯಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಖರೀದಿಸುತ್ತಿರುವವ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಆದರೆ, ಆ್ಯಪಲ್‌ಗೆ ಹೊಸ ಗ್ರಾಹಕರು ಬರುತ್ತಿಲ್ಲ’ ಇದರಿಂದಾಗಿ ನಿರೀಕ್ಷಿತ ಮಟ್ಟದ ಮಾರಾಟ ಸಾಧ್ಯವಾಗುತ್ತಿಲ್ಲ’ ಎಂದೂ ವಿಶ್ಲೇಷಣೆ ಮಾಡಿದ್ದಾರೆ.

ರೂಪಾಯಿ ಮೌಲ್ಯ ಇಳಿಕೆಯಿಂದಲೂ ಆ್ಯಪಲ್‌ ಮಾರಾಟಕ್ಕೆ ಹಿನ್ನಡೆಯಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.