ನವದೆಹಲಿ (ಪಿಟಿಐ): ₹ 880 ಕೋಟಿ ಆದಾಯವನ್ನು ಮುಚ್ಚಿಟ್ಟಿರುವುದು ಬೆಂಗಳೂರಿನ ಮಾನವ ಸಂಪನ್ಮೂಲ ಪೂರೈಕೆ ಕಂಪನಿಯೊಂದಕ್ಕೆ ಸೇರಿದ ಸ್ಥಳಗಳಲ್ಲಿ ನಡೆಸಿದ ಪರಿಶೀಲನೆಯಿಂದ ಗೊತ್ತಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಳಿಯು (ಸಿಬಿಡಿಟಿ) ಮಂಗಳವಾರ ತಿಳಿಸಿದೆ.
ಈ ಕಂಪನಿ ಯಾವುದು ಎಂಬುದು ಗೊತ್ತಾಗಿಲ್ಲ. ಕಂಪನಿಗೆ ಸೇರಿದ ಎರಡು ಸ್ಥಳಗಳಲ್ಲಿ ಇದೇ 8ರಂದು ಶೋಧ ನಡೆದಿತ್ತು. ಆದಾಯ ತೆರಿಗೆ ಕಾಯ್ದೆ 1961ರ 80ಜೆಜೆಎಎ ಸೆಕ್ಷನ್ ಅಡಿಯಲ್ಲಿ ಭಾರಿ ಮೊತ್ತದ ರಿಯಾಯಿತಿ ನೀಡಬೇಕು ಎಂದು ಕಂಪನಿಯು ಕೋರಿತ್ತು. ಹಲವು ಷರತ್ತುಗಳನ್ನು ಪೂರೈಸಿದರೆ ಮಾತ್ರ ಈ ರಿಯಾಯಿತಿ ಪಡೆಯಲು ಅವಕಾಶ ಇದೆ. ಕೆಲವು ವರ್ಷಗಳಲ್ಲಿ ಒಟ್ಟು ₹ 880 ಕೋಟಿ ಆದಾಯವನ್ನು ಮುಚ್ಚಿಡಲಾಗಿದೆ ಎಂದು ಸಿಬಿಡಿಟಿಯ ಹೇಳಿಕೆಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.