ADVERTISEMENT

ಐಟಿಐ ಎಂಎಫ್‌: ₹ 164 ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 20:00 IST
Last Updated 23 ಜನವರಿ 2020, 20:00 IST

ಬೆಂಗಳೂರು: ಐಟಿಐ ಮ್ಯೂಚುವಲ್ ಫಂಡ್‍ನ ಹೊಸ ‘ಐಟಿಐ ಬ್ಯಾಲೆನ್ಸಡ್ ಅಡ್ವಾಂಟೇಜ್ ಫಂಡ್’ ಕೊಡುಗೆ ಅವಧಿ ಮುಕ್ತಾಯಗೊಂಡಿದ್ದು, ₹ 164 ಕೋಟಿ ಸಂಗ್ರಹಿಸಿದೆ.

ಒಂಬತ್ತು ತಿಂಗಳಲ್ಲಿ ಏಳು ಸಾವಿರಕ್ಕೂ ಹೆಚ್ಚು ಸ್ವತಂತ್ರ ಹಣಕಾಸು ಸಲಹೆಗಾರರನ್ನು ಹೊಂದಿದ್ದು, 16 ಶಾಖೆಗಳನ್ನು ಆರಂಭಿಸಿದೆ. ಮುಂದಿನ ವರ್ಷಗಳಲ್ಲಿ 48 ಶಾಖೆಗಳನ್ನು ತೆರೆಯುವ ಉದ್ದೇಶವನ್ನು ಕಂಪೆನಿ ಹೊಂದಿದೆ.

ಐಟಿಐ ಬ್ಯಾಲೆನ್ಸಡ್ ಅಡ್ವಾಂಟೇಜ್ ಫಂಡ್ ಎಲ್ಲ ಬಗೆಯ ಹೂಡಿಕೆದಾರರಿಗೂ ಸೂಕ್ತ ಹೂಡಿಕೆಯಾಗಿದೆ. ‘ಹೊಸ ಫಂಡ್‍ಗೆ ದೊರೆತ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿದೆ’ ಎಂದು ಕಂಪನಿಯ ಸಿಇಒ ಜಾರ್ಜ್ ಹೆಬೆರ್ ಜೋಸೆಫ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.