ADVERTISEMENT

ಬೋಯಿಂಗ್, ಏರ್‌ಬಸ್‌ ಜೊತೆ ಜೆಟ್ ಏರ್‌ವೇಸ್ ಮಾತುಕತೆ

ಪಿಟಿಐ
Published 3 ಡಿಸೆಂಬರ್ 2021, 15:52 IST
Last Updated 3 ಡಿಸೆಂಬರ್ 2021, 15:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮುಂದಿನ ವರ್ಷದಲ್ಲಿ ವಿಮಾನಯಾನ ಸೇವೆಗಳನ್ನು ಮತ್ತೆ ಆರಂಭಿಸುವ ಉದ್ದೇಶ ಹೊಂದಿರುವ ಜೆಟ್ ಏರ್‌ವೇಸ್ ಕಂಪನಿಯು ವಿಮಾನಗಳನ್ನು ಖರೀದಿಸಲು ಮತ್ತು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲು ಬೋಯಿಂಗ್ ಹಾಗೂ ಏರ್‌ಬಸ್‌ ಕಂಪನಿಗಳ ಜೊತೆ ಮಾತುಕತೆ ನಡೆಸಿರುವುದಾಗಿ ತಿಳಿಸಿದೆ.

ಹಣಕಾಸಿನ ಬಿಕ್ಕಟ್ಟಿನ ಕಾರಣದಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಈ ಕಂಪನಿಯನ್ನು ಈಗ ಮುರಾರಿಲಾಲ್ ಜಲನ್ ಮತ್ತು ಕಲ್‌ರಾಕ್‌ ಕ್ಯಾಪಿಟಲ್ ಒಕ್ಕೂಟವು ಖರೀದಿಸಿದೆ.ಈಗ ನಡೆದಿರುವ ಮಾತುಕತೆಗಳು ಕಂಪನಿಯ ಪುನಶ್ಚೇತನಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಮುಂಬೈ ಪೀಠ ಅನುಮೋದನೆ ನೀಡಿರುವ ಕಾರ್ಯಯೋಜನೆಯ ಭಾಗ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಸರಿಸುಮಾರು 200 ವಿಮಾನಗಳನ್ನು ಹೊಂದಲು ಒಕ್ಕೂಟವು ಏರ್‌ಬಸ್‌ ಮತ್ತು ಬೋಯಿಂಗ್ ಜೊತೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.