ನವದೆಹಲಿ: ಜೆಟ್ ಏರ್ವೇಸ್ ವಿಮಾನಯಾನ ಕಂಪನಿಯ ನಷ್ಟ 2018–19ರಲ್ಲಿ ₹ 5,536 ಕೋಟಿಗೆ ತಲುಪಿದೆ. ವೆಚ್ಚದಲ್ಲಿ ಏರಿಕೆ ಆಗಿರುವುದರಿಂದ ನಷ್ಟದ ಪ್ರಮಾಣ ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ. 2017–18ರಲ್ಲಿ ಕಂಪನಿಯ ನಷ್ಟ ₹ 766 ಕೋಟಿ ಇತ್ತು.
ಒಟ್ಟಾರೆ ವರಮಾನ ₹ 23,958 ಕೋಟಿಗಳಿಂದ ₹ 23,314 ಕೋಟಿಗಳಿಗೆ ಇಳಿಕೆಯಾಗಿದೆ. ಇಂಧನ ದರ ಗರಿಷ್ಠ ಮಟ್ಟದಲ್ಲಿ ಇದ್ದಿದ್ದರಿಂದ ಒಟ್ಟಾರೆ ವೆಚ್ಚವು ₹ 28,142 ಕೋಟಿ ಆಗಿದೆ ಎಂದು ಕಂಪನಿ ತಿಳಿಸಿದೆ.ಆರ್ಥಿಕವಾಗಿ ನಷ್ಟದಲ್ಲಿರುವ ಕಂಪನಿಯು 2019ರ ಏಪ್ರಿಲ್ 18ರಂದು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ದಿವಾಳಿ ಪ್ರಕ್ರಿಯೆಗೆ ಒಳಗಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.