ADVERTISEMENT

ವಿಮಾನ ಇಂಧನ ದರ ಶೇ 1.65ರಷ್ಟು ಹೆಚ್ಚಳ

ಪಿಟಿಐ
Published 1 ಜುಲೈ 2023, 14:36 IST
Last Updated 1 ಜುಲೈ 2023, 14:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಮಾನ ಇಂಧನ ದರವನ್ನು (ಎಟಿಎಫ್‌) ಪ್ರತಿ ಕಿಲೋ ಲೀಟರಿಗೆ ₹1476.79 ರಷ್ಟು (ಶೇ 1.65) ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ನಾಲ್ಕು ತಿಂಗಳ ಬಳಿಕ ದರ ಹೆಚ್ಚಳ ಮಾಡಿವೆ.

ಈ ಪರಿಷ್ಕರಣೆಯಿಂದಾಗಿ ದೆಹಲಿಯಲ್ಲಿ ಪ್ರತಿ ಕಿಲೋ ಲೀಟರ್‌ ದರ ₹90779.88ಕ್ಕೆ ಏರಿಕೆ ಆಗಿದೆ. (ಒಂದು ಕಿಲೋ ಲೀಟರ್‌ ಎಂದರೆ ಒಂದು ಸಾವಿರ ಲೀಟರ್).  ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಮಾರಾಟ ದರದಲ್ಲಿ ವ್ಯತ್ಯಾಸ ಆಗುತ್ತದೆ. ನಾಲ್ಕು ತಿಂಗಳಿನಿಂದ ಇಳಿಮುಖ ಆಗಿದ್ದ ಕಚ್ಚಾ ತೈಲ ದರ ಇದೀಗ ಏರಿಕೆ ಕಾಣುತ್ತಿದೆ. ಹೀಗಾಗಿ ಎಟಿಎಫ್‌ ದರ ಹೆಚ್ಚಳ ಮಾಡಿರುವುದಾಗಿ ಕಂಪನಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT