ನವದೆಹಲಿ: ‘ವಜ್ರ ಮತ್ತು ಆಭರಣ ವಲಯಕ್ಕೆ ಜಿಎಸ್‌ಟಿ ಸರಳೀಕರಣವು ಅತಿದೊಡ್ಡ ನೆಮ್ಮದಿ ನೀಡಿದೆ’ ಎಂದು ಹರಳು ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ಶುಕ್ರವಾರ ತಿಳಿಸಿದೆ.
ಆಭರಣ ಪೆಟ್ಟಿಗೆಗಳ ಮೇಲಿನ ಜಿಎಸ್‌ಟಿಯನ್ನು ಶೇ 12ರಿಂದ ಶೇ 5ಕ್ಕೆ ಇಳಿಸಲಾಗಿದೆ. ಇದರಿಂದ ಸಣ್ಣ ವ್ಯಾಪಾರಿಗಳು ಮತ್ತು ರಫ್ತುದಾರರಿಗೆ ವೆಚ್ಚ ಕಡಿಮೆಯಾಗುತ್ತದೆ. ಪ್ಯಾಕೇಜಿಂಗ್ ಮತ್ತು ಉಡುಗೊರೆಗಳನ್ನು ಗ್ರಾಹಕರಿಗೆ ಹೆಚ್ಚು ಕೈಗೆಟುಕುವಂತೆ ಮಾಡಲಿದ್ದು, ವ್ಯಾಪಾರಿಗಳು ಮತ್ತು ಖರೀದಿದಾರರಿಗೆ ಸಮವಾಗಿ ಪ್ರಯೋಜನ ನೀಡುತ್ತದೆ’ ಎಂದು ಜಿಜೆಇಪಿಸಿ ಅಧ್ಯಕ್ಷ ಕಿರಿತ್ ಬನ್ಸಾಲಿ ಹೇಳಿದ್ದಾರೆ.
ಈ ಕ್ರಮಗಳು ದೇಶಿಯ ಬೇಡಿಕೆಯನ್ನು ಹೆಚ್ಚಿಸಲಿದ್ದು, ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ, ವಜ್ರ ಸಂಸ್ಕರಣೆ, ಆಭರಣ ವಿನ್ಯಾಸ ಮತ್ತು ರಫ್ತಿಗೆ ಪ್ರಮುಖ ಕೇಂದ್ರವಾಗಿ ಭಾರತದ ಸ್ಥಾನವನ್ನು ಭದ್ರಪಡಿಸುತ್ತವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.