ADVERTISEMENT

ತಿಂಗಳು ಪೂರ್ತಿ ವ್ಯಾಲಿಡಿಟಿ ಇರುವ ಯೋಜನೆ ಆರಂಭಿಸಿದ ಜಿಯೊ

ಪಿಟಿಐ
Published 28 ಮಾರ್ಚ್ 2022, 20:18 IST
Last Updated 28 ಮಾರ್ಚ್ 2022, 20:18 IST
   

ನವದೆಹಲಿ: ದೇಶದ ಅತಿದೊಡ್ಡ ದೂರಸಂಪರ್ಕ ಸೇವಾ ಕಂಪನಿಯಾದ ರಿಲಯನ್ಸ್ ಜಿಯೊ, ಪೂರ್ತಿ ಒಂದು ತಿಂಗಳ ಅವಧಿ ಇರುವ ‍ಪ್ರಿಪೇಯ್ಡ್ ಯೋಜನೆ ಆರಂಭಿಸಿದೆ. ಗ್ರಾಹಕರು ₹ 259 ಪಾವತಿಸಿ ರೀಚಾರ್ಜ್ ಮಾಡಿಕೊಂಡರೆ, ರೀಚಾರ್ಜ್ ಮಾಡಿಕೊಂಡ ತಾರೀಕಿನಿಂದ ಮುಂಬರುವ ತಿಂಗಳ ಅದೇ ತಾರೀಕಿನವರೆಗೆ ರೀಚಾರ್ಜ್ ವ್ಯಾಲಿಡಿಟಿ ಇರಲಿದೆ.

ಈ ಬಗೆಯ ಕ್ಯಾಲೆಂಡರ್ ತಿಂಗಳ ವ್ಯಾಲಿಡಿಟಿ ಯೋಜನೆ ಆರಂಭಿಸಿದ ಮೊದಲ ಕಂಪನಿ ತಾನು ಎಂದು ಜಿಯೊ ಹೇಳಿದೆ. ₹ 259 ರೀಚಾರ್ಜ್ ಮಾಡಿಕೊಂಡರೆ, ಪ್ರತಿದಿನ 1.5 ಜಿ.ಬಿ. ಡೇಟಾ, ಅನಿಯಮಿತ ಕರೆ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದೆ.

ತಿಂಗಳಲ್ಲಿ 30 ದಿನ ಇರಲಿ ಅಥವಾ 31 ದಿನ ಇರಲಿ, ರೀಚಾರ್ಜ್ ಮಾಡಿಕೊಂಡ ತಾರೀಕಿನಿಂದ ಮುಂದಿನ ತಿಂಗಳ ಅದೇ ತಾರೀಕಿನವರೆಗೆ ವ್ಯಾಲಿಡಿಟಿ ಇರುತ್ತದೆ ಎಂದು ಕಂಪನಿ ಹೇಳಿದೆ. ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವವರು ವರ್ಷಕ್ಕೆ 12 ಬಾರಿ ಮಾತ್ರ ರೀಚಾರ್ಜ್ ಮಾಡಿಸಿದರೆ ಸಾಕು ಎಂದೂ ಅದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.