ADVERTISEMENT

ಜಿಯೊ: ಹೊಸ ವರ್ಷಕ್ಕೆ ವಿಶೇಷ ಕೊಡುಗೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 21:59 IST
Last Updated 23 ಡಿಸೆಂಬರ್ 2019, 21:59 IST
ಜಿಯೊ
ಜಿಯೊ   

ನವದೆಹಲಿ : ಮುಕೇಶ್‌ ಅಂಬಾನಿ ಒಡೆತನದ ಮೊಬೈಲ್‌ ಸೇವಾ ಸಂಸ್ಥೆ ರಿಲಯನ್ಸ್‌ ಜಿಯೊ, ₹ 2,020ಕ್ಕೆ ಒಂದು ವರ್ಷದವರೆಗೆ ಅನಿಯಮಿ(ಪಿಟಿಐ)ತ ಸೇವೆಗಳ ‘2020 ಹ್ಯಾಪಿ ನ್ಯೂ ಇಯರ್‌ ಆಫರ್‌’ ಹೆಸರಿನ ವಿಶೇಷ ಕೊಡುಗೆ ಪ್ರಕಟಿಸಿದೆ.

ಈ ಕೊಡುಗೆ ನಾಳೆಯಿಂದ (ಡಿ. 24) ಜನವರಿ ಮೊದಲ ವಾರದವರೆಗೆ ಲಭ್ಯ ಇರಲಿದೆ. ಪ್ರತಿ ದಿನ 1.5 ಜಿಬಿ ಡೇಟಾ, ಜಿಯೊ ಸಂಪರ್ಕ ಜಾಲದಲ್ಲಿ ಅನಿಯಮಿತ ಉಚಿತ ಕರೆಗಳ ಜತೆಗೆ ಜಿಯೊ ಆ್ಯಪ್‌ಗಳ ಬಳಕೆ ಉಚಿತವಾಗಿರುತ್ತದೆ. ಜಿಯೊ ಫೋನ್‌ ಬಳಕೆದಾರರು, 12 ತಿಂಗಳ ಅನಿಯಮಿತ ಸೇವೆಗಳ ಜತೆ ಹೊಸ ಜಿಯೊ ಫೋನ್‌ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT