ADVERTISEMENT

ಜಿಯೊ ಭಾರತದ ಪ್ರಬಲ ಟೆಲಿಕಾಂ ಬ್ರ್ಯಾಂಡ್‌

ಪಿಟಿಐ
Published 13 ನವೆಂಬರ್ 2022, 21:01 IST
Last Updated 13 ನವೆಂಬರ್ 2022, 21:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ಭಾರತದ ದೂರಸಂಪರ್ಕ ವಲಯದ ಪ್ರಬಲ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ.

ಟ್ರಸ್ಟ್‌ ರಿಸರ್ಚ್‌ ಅಡ್ವೈಸರಿ (ಟಿಆರ್‌ಎ) ಕಂಪನಿಯು ‘2022ರಲ್ಲಿ ಹೆಚ್ಚು ಜನ ಬಯಸುವ ಬ್ರ್ಯಾಂಡ್‌’ಗಳ ಕುರಿತು ವರದಿ ಬಿಡುಗಡೆ ಮಾಡಿದೆ. ಆ ಪ್ರಕಾರ, ದೂರಸಂಪರ್ಕ ವಿಭಾಗದಲ್ಲಿ ಜಿಯೊ ಮೊದಲ ಸ್ಥಾನದಲ್ಲಿದ್ದು, ಭಾರ್ತಿ ಏರ್‌ಟೆಲ್‌, ವೊಡಾಪೋನ್‌ ಐಡಿಯಾ ಮತ್ತು ಬಿಎಸ್‌ಎನ್‌ಎಲ್‌ ನಂತರದ ಸ್ಥಾನ ಪಡೆದುಕೊಂಡಿವೆ.

ಉಡುಪು ವಿಭಾಗದಲ್ಲಿ ಅತಿ ಹೆಚ್ಚು ಇಷ್ಟಪಡುವ ಬ್ರ್ಯಾಂಡ್‌ಗಳ ಪೈಕಿ ಅಡಿಡಾಸ್‌ಗೆ ಮೊದಲ ಸ್ಥಾನ. ನೈಕ್‌, ರೇಮಂಡ್ಸ್‌, ಅಲೆನ್‌ ಸೋಲಿ ಮತ್ತು ಪೀಟರ್‌ ಇಂಗ್ಲೆಂಡ್‌ ನಂತರದ ಸ್ಥಾನದಲ್ಲಿವೆ.

ADVERTISEMENT

ವಾಹನ ವಿಭಾಗ: ಬಿಎಂಡಬ್ಲ್ಯುಗೆ ಮೊದಲ ಸ್ಥಾನ ದೊರೆತಿದೆ. ಟೊಯೋಟ, ಹುಂಡೈ ಮತ್ತು ಹೋಂಡಾ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿವೆ.

ಬ್ಯಾಂಕಿಂಗ್‌ ಮತ್ತು ಹಣಕಾಸು ಸೇವೆಗಳಲ್ಲಿ ಎಲ್‌ಐಸಿ ಮುಂಚೂಣಿಯಲ್ಲಿದೆ. ಎಸ್‌ಬಿಐ (2), ಐಸಿಐಸಿಐ ಬ್ಯಾಂಕ್‌ (3) ನಂತರದ ಸ್ಥಾನದಲ್ಲಿವೆ.

ಇಂಧನ: ಎಚ್‌ಪಿಸಿಎಲ್‌ ಮೊದಲ ಸ್ಥಾನದಲ್ಲಿದ್ದರೆ, ಇಂಡಿಯನ್‌ ಆಯಿಲ್‌ ಮತ್ತು ಅದಾನಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಆಹಾರ ಮತ್ತು ಪಾನೀಯ ವಿಭಾಗದಲ್ಲಿ ಅಮೂಲ್‌ ಮತ್ತು ನೆಸ್‌ಕೆಫೆ, ಎಫ್‌ಎಂಸಿಜಿ ವಿಭಾಗದಲ್ಲಿ ಫಾಗ್‌, ಲ್ಯಾಕ್ಮೆ, ನಿವಿಯಾ ಮತ್ತು ಕೋಲ್ಗೇಟ್‌ ಸ್ಥಾನ ಪಡೆದುಕೊಂಡಿವೆ. ಇಂಟರ್ನೆಟ್‌ ವಿಭಾಗದಲ್ಲಿ ಅಮೆಜಾನ್‌ ಬ್ರ್ಯಾಂಡ್‌ ಮೊದಲ ಸ್ಥಾನದಲ್ಲಿದ್ದರೆ, ಫೇಸ್‌ಬುಕ್‌, ಫ್ಲಿಪ್‌ಕಾರ್ಟ್‌ ಮತ್ತು ಗೂಗಲ್‌ ನಂತರದ ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.