ಬೆಂಗಳೂರು: ಪ್ರಮುಖ ಚಿನ್ನಾಭರಣ ಕಂಪನಿಯಾಗಿರುವ ಜೋಸ್ ಅಲುಕ್ಕಾಸ್ ನಗರದ ಡಿಕನ್‌ಸನ್ ರಸ್ತೆಯಲ್ಲಿ ಶನಿವಾರ ಹೊಸ ಮಳಿಗೆ ತೆರೆಯಲಿದೆ. ಈ ಮಳಿಗೆಯಲ್ಲಿ ಬಿಐಎಸ್ ಹಾಲ್‌ಮಾರ್ಕ್ ಇರುವ ಚಿನ್ನದ ಆಭರಣಗಳು ಹಾಗೂ ಅಂತರರಾಷ್ಟ್ರೀಯ ಪ್ರಯೋಗಾಲಯಗಳಿಂದ ಪ್ರಮಾಣಪತ್ರ ಪಡೆದಿರುವ ವಜ್ರಗಳು ಇರಲಿವೆ ಎಂದು ಕಂಪನಿ ತಿಳಿಸಿದೆ.
ಆಕರ್ಷಕ ವಿನ್ಯಾಸದ ಪ್ಲಾಟಿನಂ ಆಭರಣಗಳು, ಮಳಿಗೆ ಆರಂಭದ ಕೆಲವು ವಿಶೇಷ ಕೊಡುಗೆಗಳು ಇರಲಿವೆ. ₹ 35 ಸಾವಿರ ಮೌಲ್ಯದ ಚಿನ್ನಾಭರಣ ಖರೀದಿಸುವವರಿಗೆ ಚಿನ್ನದ ನಾಣ್ಯವನ್ನು ಉಚಿತವಾಗಿ ನೀಡಲಾಗುತ್ತದೆ. ಹಳೆಯ 22 ಕ್ಯಾರಟ್ ಚಿನ್ನದ ಆಭರಣಗಳನ್ನು ಬಿಐಎಸ್ ಹಾಲ್‌ಮಾರ್ಕ್ ಇರುವ ಆಭರಣಗಳೊಂದಿಗೆ, ವಜ್ರದೊಂದಿಗೆ ನಷ್ಟವಿಲ್ಲದೆ ವಿನಿಮಯ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ. ಇಷ್ಟೇ ಅಲ್ಲದೆ, ವಜ್ರದ ಮೇಲೆ ಶೇ 20ರಷ್ಟು, ಪ್ಲಾಟಿನಂ ಮೇಲೆ ಶೇ 7ರಷ್ಟು ರಿಯಾಯಿತಿ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.