ADVERTISEMENT

ಜೋಯಾಲುಕ್ಕಾಸ್‌ನಲ್ಲಿ ರಿಯಾಯಿತಿ ಮಾರಾಟ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 16:52 IST
Last Updated 4 ಮಾರ್ಚ್ 2021, 16:52 IST
ಜೋಯಾಲುಕ್ಕಾಸ್ ಮಳಿಗೆ
ಜೋಯಾಲುಕ್ಕಾಸ್ ಮಳಿಗೆ   

ಬೆಂಗಳೂರು: ಚಿನ್ನಾಭರಣಗಳ ಮಾರಾಟ ಮಳಿಗೆಯಾದ ಜೋಯಾಲುಕ್ಕಾಸ್‌, ಆಭರಣ ತಯಾರಿಕಾ ವೆಚ್ಚದ ಮೇಲೆ ಗ್ರಾಹಕರಿಗೆ ಶೇಕಡ 50ರಷ್ಟು ರಿಯಾಯಿತಿ ಘೋಷಿಸಿದೆ. ಈ ರಿಯಾಯಿತಿಯು ಎಲ್ಲ ಬಗೆಯ ಆಭರಣಗಳಿಗೆ ಅನ್ವಯ ಆಗಲಿದೆ.

‘ಆಭರಣ ತಯಾರಿಕಾ ವೆಚ್ಚವು ನಮ್ಮ ಮಳಿಗೆಗಳಲ್ಲಿ ಅತ್ಯಂತ ಸ್ಪರ್ಧಾತ್ಮಕವಾಗಿದೆ. ಈಗ ಘೋಷಿಸಿರುವ ಶೇ 50ರ ರಿಯಾಯಿತಿಯಿಂದಾಗಿ ಗ್ರಾಹಕರಿಗೆ ದೊಡ್ಡ ಪ್ರಮಾಣದಲ್ಲಿ ಹಣ ಉಳಿತಾಯ ಆಗಲಿದೆ’ ಎಂದು ಸಮೂಹದ ಅಧ್ಯಕ್ಷ ಜೋಯ್ ಅಲುಕ್ಕಾಸ್ ಹೇಳಿದ್ದಾರೆ.

ಈ ಕೊಡುಗೆಯು ಜೋಯಾಲುಕ್ಕಾಸ್‌ನ ಎಲ್ಲ ಮಳಿಗೆಗಳಲ್ಲಿ ಲಭ್ಯವಿದ್ದು, ಮಾರ್ಚ್‌ 14ರಂದು ಕೊನೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.