ಬೆಂಗಳೂರು: ಜೋಯಾಲುಕ್ಕಾಸ್‌ನಿಂದ ವರ್ಷದ ಅತಿದೊಡ್ಡ ಆಭರಣ ಮಾರಾಟದ ಅಂಗವಾಗಿ ಗ್ರಾಹಕರಿಗೆ ವಿಶೇಷ ಕೊಡುಗೆ ಪ್ರಕಟಿಸಲಾಗಿದೆ. ಈ ಕೊಡುಗೆ ಅಕ್ಟೋಬರ್ 5ಕ್ಕೆ ಅಂತ್ಯಗೊಳ್ಳಲಿದೆ.
ಮಾರಾಟದ ಅಂಗವಾಗಿ ಆಭರಣಗಳ ಮಜೂರಿ ಮೇಲೆ ಶೇಕಡ 50ರಷ್ಟು ರಿಯಾಯಿತಿ ಇರಲಿದೆ. ಚಿನ್ನ, ಕತ್ತರಿಸಿದ ಮತ್ತು ಕತ್ತರಿಸದ ವಜ್ರ, ಪ್ಲಾಟಿನಂ, ಬೆಳ್ಳಿ ಮತ್ತು ಅಮೂಲ್ಯ ಹರಳುಗಳ ಶ್ರೇಣಿಯ ವಿನ್ಯಾಸಗಳಿಗೆ ರಿಯಾಯಿತಿ ಅನ್ವಯವಾಗಲಿದೆ. ಗ್ರಾಹಕರು ಹತ್ತಿರದ ನಮ್ಮ ಮಳಿಗೆಗೆ ಭೇಟಿ ನೀಡಿ ಕೊಡುಗೆಯನ್ನು ಪಡೆದುಕೊಳ್ಳಬೇಕು ಎಂದು ಜೋಯಾಲುಕ್ಕಾಸ್ ಪ್ರಕಟಣೆಯಲ್ಲಿ ತಿಳಿಸಿದೆ.
‘ಸೀಮಿತ ಅವಧಿಯ ರಿಯಾಯಿತಿಯ ಜೊತೆಗೆ, ಆಭರಣಗಳಿಗೆ ಉಚಿತ ಆಜೀವ ಪರ್ಯಂತ ನಿರ್ವಹಣೆ, ಒಂದು ವರ್ಷದ ಉಚಿತ ವಿಮೆ ಮತ್ತು ಪ್ರತಿ ಖರೀದಿಯ ಮೇಲೆ ಶೇಕಡ 100ರಷ್ಟು ಮರುಖರೀದಿ ಗ್ಯಾರಂಟಿ ಪ್ರಯೋಜನವನ್ನು ಗ್ರಾಹಕರು ಪಡೆಯುತ್ತಾರೆ’ ಎಂದು ಜೋಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಜೋಯ್ ಅಲುಕ್ಕಾಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.