ಬೆಂಗಳೂರು: ಜೋಯಾಲುಕ್ಕಾಸ್ ಕಂಪನಿಯು ‘ಸೀತಾ ಕಲ್ಯಾಣಂ’ ಹೆಸರಿನಲ್ಲಿ ವಧುವಿನ ಚಿನ್ನಾಭರಣಗಳ ಸಂಗ್ರಹವನ್ನು ಬಿಡುಗಡೆ ಮಾಡಿದೆ.
ಈ ವಿಶೇಷ ಸಂಗ್ರಹವು ದೇಶದಾದ್ಯಂತ ಇರುವ ಕಂಪನಿಯ ಎಲ್ಲ ಮಳಿಗೆಗಳಲ್ಲಿಯೂ ಲಭ್ಯವಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದ ಸಾಂಪ್ರದಾಯಿಕ ಮೌಲ್ಯಗಳಿಗೆ ಮಾನ್ಯತೆ ನೀಡುವ ಇಂದಿನ ಆಧುನಿಕ ವಧುವಿಗಾಗಿ ಈ ವಿಶಿಷ್ಟ್ಯ ಸಂಗ್ರಹವನ್ನು ವಿನ್ಯಾಸಗೊಳಿಸಲಾಗಿದೆ. ಉತ್ಕೃಷ್ಟ ಮೌಲ್ಯ ತಂದುಕೊಡುವ ಆಭರಣಗಳನ್ನು ಸೃಷ್ಟಿಸುವಲ್ಲಿ ಜೋಯಾಲುಕ್ಕಾಸ್ ಸದಾ ಗಮನ ಹರಿಸುತ್ತದೆ ಎಂದು ಜೋಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಜೋಯ್ ಅಲುಕ್ಕಾಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.