ನವದೆಹಲಿ: ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಮೂಲಕ ಜೆಎಸ್‌ಡಬ್ಲ್ಯು ಸಿಮೆಂಟ್ ₹3,600 ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ.
ಷೇರುಗಳಿಗೆ ಬಿಡ್ ಸಲ್ಲಿಸಲು ಆಗಸ್ಟ್ 7ರಿಂದ 11ರವರೆಗೆ ಅವಕಾಶ ಇರಲಿದೆ. ಆರಂಭಿಕ ಹೂಡಿಕೆದಾರರು (ಆ್ಯಂಕರ್ ಇನ್‌ವೆಸ್ಟರ್ಸ್) ಆಗಸ್ಟ್ 6ರಂದು ಐಪಿಒಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈಕ್ವಿಟಿ ಷೇರುಗಳ ಹಂಚಿಕೆ ಮೂಲಕ ₹1,600 ಕೋಟಿ ಮತ್ತು ಆಫರ್ ಫಾರ್ ಸೇಲ್‌ನಿಂದ (ಒಎಫ್‌ಎಸ್) ₹2 ಸಾವಿರ ಕೋಟಿ ಸಂಗ್ರಹಿಸಲಿದೆ.
ಸಂಗ್ರಹಿಸಿದ ಬಂಡವಾಳವನ್ನು ರಾಜಸ್ಥಾನದ ನಾಗೌರ್‌ನಲ್ಲಿನ ಹೊಸ ಸಿಮೆಂಟ್ ಘಟಕಕ್ಕೆ ಬಳಸಲಾಗುವುದು. ಅಲ್ಲದೆ, ಸಾಲ ಮರುಪಾವತಿಸಲು ಮತ್ತು ಕಂಪನಿಯ ವ್ಯವಹಾರ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ.
ಐಪಿಒ ಮೂಲಕ ₹4 ಸಾವಿರ ಕೋಟಿ ಸಂಗ್ರಹಿಸುವುದಾಗಿ ಕಂಪನಿ ಈ ಮೊದಲು ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.