ADVERTISEMENT

ಜೆಎಸ್‌ಡಬ್ಲ್ಯು ಸ್ಟೀಲ್‌ ಸಾಮರ್ಥ್ಯ ವೃದ್ಧಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 20:15 IST
Last Updated 22 ನವೆಂಬರ್ 2018, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಳ್ಳಾರಿಯಲ್ಲಿರುವ ವಿಜಯನಗರ ಉಕ್ಕು ತಯಾರಿಕಾ ಘಟಕದ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲು ಜೆಎಸ್‌ಡಬ್ಲ್ಯು ಸ್ಟೀಲ್‌ ನಿರ್ಧರಿಸಿದೆ.

‘ಈ ಘಟಕದಲ್ಲಿ ಸದ್ಯಕ್ಕೆ ವರ್ಷಕ್ಕೆ 1.20 ಕೋಟಿ ಟನ್‌ ಉಕ್ಕು ತಯಾರಾಗುತ್ತಿದೆ. ಎರಡು ಹಂತದಲ್ಲಿ ತಯಾರಿಕಾ ಸಾಮರ್ಥ್ಯವನ್ನು 2.40 ಕೋಟಿ ಟನ್‌ಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ.ಆ ಮೂಲಕ ಇದನ್ನು ವಿಶ್ವದಲ್ಲಿಯೇ ಅತಿ ಹೆಚ್ಚು ಉಕ್ಕು ತಯಾರಿಕಾ ಘಟಕವನ್ನಾಗಿ ರೂಪಿಸುವ ಗುರಿ ಹೊಂದಿದ್ದೇವೆ' ಎಂದು ಜೆಎಸ್‌ಡಬ್ಲ್ಯು ಸ್ಟೀಲ್‌ನ ಉಪ ವ್ಯವಸ್ಥಾಪಕ ನಿರ್ದೆಶಕ ವಿನೋದ್‌ ನಾವಲ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ ಕಬ್ಬಿಣದ ಅದಿರಿನ ಕೊರತೆ ಇದ್ದು, ಆಸ್ಟ್ರೇಲಿಯಾದಿಂದ 40 ಲಕ್ಷ ಟನ್‌ ಆಮದು ಮಾಡಿಕೊಳ್ಳಲಾಗುವುದು. ಕಂಪನಿಯ ತಯಾರಿಕಾ ಸಾಮರ್ಥ್ಯ ಹೆಚ್ಚಿಸಲು ಒಟ್ಟಾರೆ ₹ 45 ಸಾವಿರ ಕೋಟಿ ಹೂಡಿಕೆ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಡೆಮಿಂಗ್‌ ಪ್ರಶಸ್ತಿ:ವಿಜಯನಗರ ಘಟಕದಲ್ಲಿ ಗುಣಮಟ್ಟ ನಿರ್ವಹಣೆಗೆ (ಟಿಕ್ಯುಎಂ)ಸಂಬಂಧಿಸಿದಂತೆ ಜಾಪನೀಸ್‌ ಯೂನಿಯನ್‌ ಆಫ್‌ ಸೈಂಟಿಸ್ಟ್ಸ್ ಆ್ಯಂಡ್‌ ಎಂಜಿನಿಯರ್ಸ್‌ನ (ಜೂಸ್‌) ಪ್ರತಿಷ್ಠಿತ ಡೆಮಿಂಗ್‌ ಪ್ರಶಸ್ತಿ ಲಭಿಸಿದೆ.

2020ರ ವೇಳೆಗೆ ತಮಿಳುನಾಡಿನ ಸೇಲಂಮತ್ತು ಮಹಾರಾಷ್ಟ್ರದ ಡೊಲ್ವಿ ಘಟಕಗಳಲ್ಲಿಯೂ ‘ಟಿಕ್ಯುಎಂ’ ಜಾರಿಗೊಳಿಸಲು ಕಂಪನಿ ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.