ಬೆಂಗಳೂರು: ಕಲ್ಯಾಣ್ ಜ್ಯುವೆಲ್ಲರ್ಸ್‌ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ (ಐಪಿಒ) ಪ್ರಕ್ರಿಯೆಯು ಮಾರ್ಚ್ 16ರಿಂದ ಆರಂಭವಾಗಲಿದೆ. ಕಂಪನಿಯು ಪ್ರತಿ ಷೇರಿಗೆ ₹ 86ರಿಂದ ₹ 87ರವರೆಗೆ ಬೆಲೆ ನಿಗದಿ ಮಾಡಿದೆ.
ಈ ಐಪಿಒ ಮೂಲಕ ಒಟ್ಟು ₹ 1,175 ಕೋಟಿ ಬಂಡವಾಳ ಸಂಗ್ರಹಿಸುವ ಗುರಿಯನ್ನು ಕಂಪನಿ ಹೊಂದಿದೆ. ಐಪಿಒ ಮೂಲಕ ಮಾರಾಟ ಆಗಲಿರುವ ಷೇರುಗಳಲ್ಲಿ ಶೇಕಡ 35ರಷ್ಟು ಷೇರುಗಳು ಸಣ್ಣ ಹೂಡಿಕೆದಾರರಿಗೆ ಮೀಸಲಾಗಿವೆ. ಗುರುವಾರ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಕಂಪನಿ ಈ ವಿಷಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.