
ಪ್ರಜಾವಾಣಿ ವಾರ್ತೆ
ಮುಂಬೈ: ಕಲ್ಯಾಣ್ ಜುವೆಲರ್ಸ್ ಕಂಪನಿಯು ದೀಪಾವಳಿ ಹಬ್ಬಕ್ಕೂ ಮೊದಲೇ ದೇಶದಾದ್ಯಂತ ಒಟ್ಟು 33 ಹೊಸ ಮಳಿಗೆಗಳನ್ನು ತೆರೆಯುವುದಾಗಿ ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸ ಮಳಿಗೆಗಳ ಒಟ್ಟು ಸಂಖ್ಯೆಯು 51ಕ್ಕೆ ತಲುಪಲಿದೆ ಎಂದು ಷೇರುಪೇಟೆಗೆ ತಿಳಿಸಿದೆ.
2023–24ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ಕಾರ್ಯಾಚರಣೆಯಿಂದ ಬರುವ ವರಮಾನವು ಹಿಂದಿನ ಅವಧಿಗೆ ಹೋಲಿಸಿದರೆ ಶೇ 32ರಷ್ಟು ಹೆಚ್ಚಾಗಿದೆ ಎಂದು ಕಂಪನಿಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.