ADVERTISEMENT

‘ಕೈಗಾರಿಕೆಗಳಿಗೆ ನಿಗಮದಿಂದ ಕಚ್ಛಾವಸ್ತು ಸರಬರಾಜು’

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 19:22 IST
Last Updated 5 ಜನವರಿ 2021, 19:22 IST
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯ ಉನ್ನತೀಕರಣ ಹಾಗೂ ಹೊಸ ಗೋದಾಮು ತೆರೆಯುವ ಸಲುವಾಗಿ ಕೆಎಸ್‍ಎಸ್‍ಐಡಿಸಿ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾದ್ ಮನೋಹರ್ ಸ್ಥಳ ಪರಿಶೀಲನೆ ನಡೆಸಿದರು. ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಹಾಗೂ ಅಧಿಕಾರಿಗಳು ಇದ್ದರು.
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯ ಉನ್ನತೀಕರಣ ಹಾಗೂ ಹೊಸ ಗೋದಾಮು ತೆರೆಯುವ ಸಲುವಾಗಿ ಕೆಎಸ್‍ಎಸ್‍ಐಡಿಸಿ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾದ್ ಮನೋಹರ್ ಸ್ಥಳ ಪರಿಶೀಲನೆ ನಡೆಸಿದರು. ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಹಾಗೂ ಅಧಿಕಾರಿಗಳು ಇದ್ದರು.   

ಬೆಂಗಳೂರು: ‘ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗೆ (ಎಸ್ಎಂಇ) ಸ್ಪರ್ಧಾತ್ಮಕ ಬೆಲೆಯಲ್ಲಿ ಕಚ್ಛಾ ಸಾಮಗ್ರಿ ಸರಬರಾಜು ಮಾಡುವುದಾಗಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (ಕೆಎಸ್‍ಎಸ್‍ಐಡಿಸಿ) ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾದ್ ಮನೋಹರ್ ಭರವಸೆ ನೀಡಿದ್ದಾರೆ’ ಎಂದುಕಾಸಿಯಾಅಧ್ಯಕ್ಷಕೆ.ಬಿ.ಅರಸಪ್ಪ ತಿಳಿಸಿದರು.

‘ಕೋವಿಡ್‌ನಿಂದ ಕೈಗಾರಿಕೆಗಳು ಬಿಕ್ಕಟ್ಟಿಗೆ ಸಿಲುಕಿದವು. ಈಗಉಕ್ಕಿನ ಬೆಲೆಯಲ್ಲಿ ನಿರಂತರ ಏರಿಕೆ ಮತ್ತು ಕಚ್ಚಾ ವಸ್ತುಗಳ ಕೊರತೆಯಿಂದ ಉಕ್ಕು ಅವಲಂಬಿತ ಅನೇಕ ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ತೀವ್ರ ತೊಂದರೆ ಉಂಟಾಗಿ, ಮುಚ್ಚುವ ಪರಿಸ್ಥಿತಿ ತಲುಪಿವೆ’ ಎಂದರು.

‘ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಬಳಕೆಗಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಕಚ್ಛಾ ಸಾಮಗ್ರಿಗಳನ್ನು ಸರಬರಾಜು ಮಾಡುವ ಕುರಿತುರಾಮ್ ಪ್ರಸಾದ್ ಮನೋಹರ್ ಅವರೊಂದಿಗೆ ಸಭೆ ನಡೆಸಲಾಯಿತು.ಬೆಲೆಗಳ ಹಠಾತ್ ಏರಿಕೆಯಿಂದಾಗಿ ಎದುರಾಗಿರುವ ಸಮಸ್ಯೆಗೆ ಪರಿಹಾರ ಕೋರಿದೆವು. ಅದಕ್ಕೆ ತಕ್ಷಣ ಸ್ಪಂದಿಸಿ,ನಿಗಮದಿಂದಲೇ ಕಚ್ಛಾ ಸಾಮಗ್ರಿಗಳ ಮಾರಾಟವನ್ನು ಜ.11ರಿಂದ ಆರಂಭಿಸುವಂತೆ ಸೂಚಿಸಿರುವುದು ಸಂತಸ ತಂದಿದೆ’ ಎಂದರು.

ADVERTISEMENT

‘ರಾಜ್ಯದಾದ್ಯಂತ ಇರುವ ಗೋದಾಮುಗಳ ಮೂಲಕ ಕೈಗಾರಿಕೆಗಳಿಗೆ ಎಲ್ಲ ರೀತಿಯ ಅಗತ್ಯವಾದ ಕಚ್ಚಾ ಸಾಮಗ್ರಿಗಳನ್ನು ಉತ್ಪಾದಕರಿಂದ ಖರೀದಿಸಿ, ಕೇವಲ ₹1ರ ಲಾಭಾಂಶದಲ್ಲಿ ಕಾಲಮಿತಿಯೊಳಗೆ ಸರಬರಾಜು ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಹೊಸದಾಗಿ ಮತ್ತೊಂದು ಗೋದಾಮು ಆರಂಭಿಸುವುದಾಗಿಯೂ ಹೇಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.