ADVERTISEMENT

ಕರ್ಣಾಟಕ ಬ್ಯಾಂಕ್‌ನ ಹೊಸ ಸಾಲ ಯೋಜನೆ; ‘ಕೆಬಿಎಲ್‌ ಮೈಕ್ರೊ ಮಿತ್ರ’ ಆರಂಭ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 14:25 IST
Last Updated 22 ಜೂನ್ 2020, 14:25 IST
 ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ  ಎಂ.ಎಸ್‌. ಮಹಾಬಲೇಶ್ವರ ಅವರು ‘ಕೆಬಿಎಲ್‌ ಮೈಕ್ರೊ ಮಿತ್ರ’ ಸಾಲ ಯೋಜನೆಗೆ ಚಾಲನೆ ನೀಡಿದರು
 ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ  ಎಂ.ಎಸ್‌. ಮಹಾಬಲೇಶ್ವರ ಅವರು ‘ಕೆಬಿಎಲ್‌ ಮೈಕ್ರೊ ಮಿತ್ರ’ ಸಾಲ ಯೋಜನೆಗೆ ಚಾಲನೆ ನೀಡಿದರು   

ಮಂಗಳೂರು: ಉತ್ಪಾದನಾ ವಲಯದ ಕಿರು ಘಟಕಗಳು ಹಾಗೂ ಸೇವಾ ವಲಯದ ಸಣ್ಣ ಘಟಕಗಳಿಗೆ ಆರ್ಥಿಕ ಬೆಂಬಲ ನೀಡಲು ಕರ್ಣಾಟಕ ಬ್ಯಾಂಕ್‌, ‘ಕೆಬಿಎಲ್‌ ಮೈಕ್ರೊ ಮಿತ್ರ’ ಹೆಸರಿನ ಹೊಸ ಸಾಲ ಯೋಜನೆ ಆರಂಭಿಸಿದೆ.

ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್‌. ಮಹಾಬಲೇಶ್ವರ ಅವರು ಸೋಮವಾರ ಇಲ್ಲಿ ಈ ಯೋಜನೆಗೆ ಚಾಲನೆ ನೀಡಿದರು. ‘ದೇಶದ ಆರ್ಥಿಕತೆಯನ್ನು ಪುನಶ್ಚೇತನದ ಹಾದಿಗೆ ತರುವುದರಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಕಿರು ಮತ್ತು ಸಣ್ಣ ಉದ್ದಿಮೆಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಯಲ್ಲೇ ಇಂತಹ ಉದ್ದಿಮೆಗಳಿಗೆ ಉತ್ತೇಜನ ನೀಡಬೇಕಾಗಿದೆ’ ಎಂದರು.

‘ಆರ್ಥಿಕತೆ ಈಗ ಪುನಶ್ಚೇತನದ ಹಾದಿಯಲ್ಲಿದೆ. ಇಂತಹ ಸಮಯದಲ್ಲಿ ಸಕಾಲಕ್ಕೆ ಸಾಲ ಸೌಲಭ್ಯ ಒದಗಿಸುವುದು ಮುಖ್ಯ. ಈ ದಿಸೆಯಲ್ಲಿ ಕೆಬಿಎಲ್‌ ಮೈಕ್ರೊ ಮಿತ್ರ ಯೋಜನೆಯು ಕಿರು ಉದ್ದಿಮೆಗಳ ಪಾಲಿಗೆ ಆಸರೆ ಒದಗಿಸುವ ಸ್ನೇಹಿತನಾಗಲಿದೆ ಎಂಬ ವಿಶ್ವಾಸವಿದೆ. ಈ ಯೋಜನೆಯು ದೇಶದಾದ್ಯಂತ ಎಲ್ಲ ಕಡೆಗಳಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಡಿಜಿಟಲ್‌ ರೂಪದಲ್ಲೂ ಜಾರಿಗೆ ಬರಲಿದೆ’ ಎಂದು ತಿಳಿಸಿದರು.

ADVERTISEMENT

ಈ ಯೋಜನೆಯಡಿ ಕಿರು ಉತ್ಪಾದನಾ ಘಟಕಗಳು ಮತ್ತು ಸೇವಾ ವಲಯದ ಸಣ್ಣ ಘಟಕಗಳಿಗೆ ₹ 10 ಲಕ್ಷದವರೆಗೆ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ದುಡಿಯುವ ಬಂಡವಾಳ ಅಥವಾ ಹೂಡಿಕೆ ಉದ್ದೇಶಕ್ಕೆ ಸಾಲ ಒದಗಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.