ADVERTISEMENT

ಕೋಟಕ್ ಮಹೀಂದ್ರ ಲಾಭ ಶೇ 3ರಷ್ಟು ಇಳಿಕೆ

ಪಿಟಿಐ
Published 25 ಅಕ್ಟೋಬರ್ 2025, 15:59 IST
Last Updated 25 ಅಕ್ಟೋಬರ್ 2025, 15:59 IST
ಕೋಟಕ್‌ ಮಹೀಂದ್ರ ಬ್ಯಾಂಕ್‌
ಕೋಟಕ್‌ ಮಹೀಂದ್ರ ಬ್ಯಾಂಕ್‌   

ನವದೆಹಲಿ: ಖಾಸಗಿ ವಲಯದ ಕೋಟಕ್ ಮಹೀಂದ್ರ ಬ್ಯಾಂಕ್‌ ಸೆಪ್ಟೆಂಬರ್ ತ್ರೈಮಾಸಿಕದ ಲಾಭದಲ್ಲಿ ಶೇ 3ರಷ್ಟು ಇಳಿಕೆ ಕಂಡಿದೆ. ಹಿಂದಿನ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹3,344 ಕೋಟಿ ಲಾಭ ಗಳಿಸಿದ್ದ ಬ್ಯಾಂಕ್, ಈ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹3,253 ಕೋಟಿ ಲಾಭ ಕಂಡಿದೆ.

ಈ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಒಟ್ಟು ವರಮಾನವು ₹16,239 ಕೋಟಿಗೆ ಹೆಚ್ಚಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹15,900 ಕೋಟಿ ಆಗಿತ್ತು. ಹಣಕಾಸಿನ ಫಲಿತಾಂಶದ ವಿವರಗಳನ್ನು ಕೋಟಕ್‌ ಮಹೀಂದ್ರ ಬ್ಯಾಂಕ್‌ ಶನಿವಾರ ಷೇರುಪೇಟೆಗೆ ಸಲ್ಲಿಸಿದೆ.

ಬ್ಯಾಂಕ್‌ನ ಬಡ್ಡಿ ವರಮಾನವು ₹13,649 ಕೋಟಿ ಆಗಿದೆ. ಇದು ಕಳೆದ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹13,216 ಕೋಟಿ ಇತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ₹7,020 ಕೋಟಿ ಇದ್ದ ನಿವ್ವಳ ಬಡ್ಡಿ ವರಮಾನವು ಈ ಬಾರಿ ₹7,311 ಕೋಟಿ ಆಗಿದೆ.

ADVERTISEMENT

ಬ್ಯಾಂಕ್‌ನ ಎನ್‌ಪಿಎ ಪ್ರಮಾಣವು ಶೇ 1,39ಕ್ಕೆ ಇಳಿಕೆ ಕಂಡಿದೆ. ಹಿಂದಿನ ವರ್ಷದಲ್ಲಿ ಇದು ಶೇ 1.49ರಷ್ಟು ಇತ್ತು.