ಬೆಂಗಳೂರು: ಟ್ರ್ಯಾಕ್ಟರ್ ತಯಾರಿಕಾ ಕಂಪನಿ ಟಾಫೆ (ಟ್ರ್ಯಾಕ್ಟರ್ಸ್ ಆ್ಯಂಡ್ ಫಾರ್ಮ್ ಎಕ್ವಿಪ್‌ಮೆಂಟ್ ಲಿಮಿಟೆಡ್) ನಿರ್ದೇಶಕಿ ಲಕ್ಷ್ಮಿ ವೇಣು ಅವರನ್ನು ಕಂಪನಿಯ ಉಪಾಧ್ಯಕ್ಷೆಯಾಗಿ ನೇಮಿಸಲಾಗಿದೆ.
ಲಕ್ಷ್ಮಿ ಅವರನ್ನು 2023ರಲ್ಲಿ ಬ್ಯುಸಿನೆಸ್ ಟುಡೇ ‘ಮೋಸ್ಟ್ ಪವರ್‌ಫುಲ್ ವುಮೆನ್ ಇನ್ ಬ್ಯುಸಿನೆಸ್’ ಎಂದು ಗುರುತಿಸಿದೆ. ಎಕನಾಮಿಕ್ ಟೈಮ್ಸ್‌ನ ‘ಯಂಗ್ ಲೀಡರ್ಸ್ - 40 ಅಂಡರ್ 40’ ಮನ್ನಣೆ ಸಹ ಪಡೆದುಕೊಂಡಿದ್ದಾರೆ. ಅಲ್ಲದೆ, ಅವರು ಪ್ರಮುಖ ಆಟೊಮೋಟಿವ್ ಬಿಡಿಭಾಗ ತಯಾರಕರಾದ ಸುಂದರಂ-ಕ್ಲೇಟನ್ ಲಿಮಿಟೆಡ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕಿಯೂ ಆಗಿದ್ದಾರೆ ಎಂದು ತಿಳಿಸಿದ್ದಾರೆ.
‘ಲಕ್ಷ್ಮಿ ಅವರು ಟಾಫೆ ಮಂಡಳಿಯ ಸದಸ್ಯೆಯಾಗಿದ್ದಾರೆ. ಅವರ ಕೊಡುಗೆ ಗುರುತಿಸಿ ಮಂಡಳಿಯು ಅವರನ್ನು ಉಪಾಧ್ಯಕ್ಷೆಯಾಗಿ ನೇಮಿಸಿದೆ’ ಎಂದು ಟಾಫೆ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಮಲ್ಲಿಕಾ ಶ್ರೀನಿವಾಸನ್ ತಿಳಿಸಿದ್ದಾರೆ.
‘ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮಂಡಳಿಗೆ ಧನ್ಯವಾದ ಅರ್ಪಿಸುತ್ತೇನೆ. ಸಂಸ್ಥೆಯ ಬಲವರ್ಧನೆ ಮತ್ತು ಕಾರ್ಯತಾಂತ್ರಿಕ ಗುರಿ ಸಾಧಿಸಲು ನಿರಂತರ ಪ್ರಯತ್ನ ಮುಂದುವರಿಸಲಾಗುವುದು. ಟಾಫೆ ಮತ್ತು ಐಷರ್ ಟ್ರ್ಯಾಕ್ಟರ್‌ಗಳ ತಂಡಗಳೊಂದಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ’ ಎಂದು ಲಕ್ಷ್ಮಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.