ADVERTISEMENT

66ನೇ ವರ್ಷಕ್ಕೆ ಕಾಲಿರಿಸಿದ ಎಲ್‌ಐಸಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 15:30 IST
Last Updated 1 ಸೆಪ್ಟೆಂಬರ್ 2021, 15:30 IST
ಎಲ್‌ಐಸಿ
ಎಲ್‌ಐಸಿ   

ಬೆಂಗಳೂರು: ದೇಶದ ಅತಿದೊಡ್ಡ ಜೀವ ವಿಮಾ ಕಂಪನಿಯಾಗಿರುವ ‘ಭಾರತೀಯ ಜೀವ ವಿಮಾ ನಿಗಮ’ವು (ಎಲ್‌ಐಸಿ) ಬುಧವಾರಕ್ಕೆ (ಸೆಪ್ಟೆಂಬರ್ 1) 65 ವರ್ಷಗಳನ್ನು ಪೂರೈಸಿ, 66ನೆಯ ವರ್ಷಕ್ಕೆ ಕಾಲಿಟ್ಟಿದೆ. ‘ಬ್ರ್ಯಾಂಡ್‌ ಫೈನಾನ್ಸ್‌ ಇನ್ಶುರೆನ್ಸ್‌ 100’ ಸಮೀಕ್ಷೆಯ ಪ್ರಕಾರ ಎಲ್‌ಐಸಿ ವಿಶ್ವದಲ್ಲಿ ಮೂರನೆಯ ಅತ್ಯಂತ ಬಲಿಷ್ಠ, 10ನೆಯ ಅತ್ಯಂತ ಮೌಲ್ಯಯುತ ಬ್ರ್ಯಾಂಡ್‌ ಆಗಿದೆ ಎಂದು ಕಂಪನಿಯ ಪ್ರಕಟಣೆ ಹೇಳಿದೆ.

1956ರಲ್ಲಿ ₹ 5 ಕೋಟಿ ಬಂಡವಾಳದೊಂದಿಗೆ ಆರಂಭವಾದ ಎಲ್‌ಐಸಿ ಇಂದು ದೇಶದ ವಿಮಾ ವಲಯದಲ್ಲಿ ಮೊದಲ ಸ್ಥಾನದಲ್ಲಿದೆ. 2020–21ನೆಯ ಸಾಲಿನಲ್ಲಿ ಕಂಪನಿಯು 2.10 ಕೋಟಿ ವಿಮೆಗಳನ್ನು ಮಾರಾಟ ಮಾಡಿದೆ. ಕಂಪನಿಯು ಈಗ 14 ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

ಒಂದು ಲಕ್ಷಕ್ಕಿಂತ ಹೆಚ್ಚಿನ ನೌಕರರು, 13.53 ಲಕ್ಷಕ್ಕಿಂತ ಹೆಚ್ಚಿನ ಏಜೆಂಟರು ಇರುವ ಕಂಪನಿಯು ವಿಮಾ ಗ್ರಾಹಕರ ಹಣವನ್ನು ಸಮುದಾಯದ ಒಳಿತಿಗಾಗಿಯೂ, ಗ್ರಾಹಕರಿಗೆ ಒಳ್ಳೆಯ ಲಾಭ ಬರುವಲ್ಲಿಯೂ ಹೂಡಿಕೆ ಮಾಡುತ್ತಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.