ADVERTISEMENT

ರದ್ದಾದ ಪಾಲಿಸಿ ನವೀಕರಣ ಅಭಿಯಾನ: ಎಲ್‌ಐಸಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 14:38 IST
Last Updated 23 ಆಗಸ್ಟ್ 2021, 14:38 IST

ಬೆಂಗಳೂರು:ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ, ರದ್ದಾಗಿರುವ ವಿಮೆ ಯೋಜನೆಯನ್ನು ನವೀಕರಿಸುವ ‘ವಿಶೇಷ ನವೀಕರಣ ಅಭಿಯಾನ’ ಆರಂಭಿಸಿದೆ.

ರದ್ದಾಗಿರುವ ವೈಯಕ್ತಿಕ ಯೋಜನೆಗಳಿಗೆ ಇದು ಅನ್ವಯಿಸಲಿದೆ. ಸೋಮವಾರದಿಂದ ಅಕ್ಟೋಬರ್‌ 22ರವರೆಗೆ ಈ ಅಭಿಯಾನ ನಡೆಯಲಿದೆ.

ನಿರ್ದಿಷ್ಟ ಅರ್ಹ ಯೋಜನೆಗಳ ಪಾಲಿಸಿಯನ್ನು ಕೆಲವು ಷರತ್ತುಗಳಿಗೆ ಒಳಪಟ್ಟು, ಮೊದಲ ಬಾರಿಗೆ ಪಾವತಿಸದೇ ಇರುವ ಪ್ರೀಮಿಯಂ ದಿನಾಂಕದಿಂದ ಐದು ವರ್ಷಗಳ ಒಳಗೆ ನವೀಕರಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಟರ್ಮ್ ಅಶ್ಯೂರೆನ್ಸ್ ಮತ್ತು ಹೈ ರಿಸ್ಕ್ ಪ್ಲಾನ್‌ಗಳನ್ನು ಹೊರತುಪಡಿಸಿ,ಪಾವತಿಸಿದೇ ಇರುವ ಒಟ್ಟು ಪ್ರೀಮಿಯಂ ಪರಿಗಣಿಸಿ ವಿಳಂಬ ಶುಲ್ಕದಲ್ಲಿರಿಯಾಯಿತಿ ನೀಡಲಾಗುತ್ತದೆ. ಅರ್ಹ ಆರೋಗ್ಯ ಮತ್ತು ಕಿರು ವಿಮಾ ಯೋಜನೆಗಳು ವಿಳಂಬ ಶುಲ್ಕದಲ್ಲಿ ರಿಯಾಯಿತಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.