ನವದೆಹಲಿ: 2024–25ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ನಿವ್ವಳ ಲಾಭದಲ್ಲಿ ಶೇ 38ರಷ್ಟು ಏರಿಕೆ ಆಗಿದೆ.
2023–24ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹13,763 ಕೋಟಿ ಲಾಭ ಗಳಿಸಿತ್ತು. ಈ ಬಾರಿಯ ಮಾರ್ಚ್ ತ್ರೈಮಾಸಿಕದಲ್ಲಿ ₹19,013 ಕೋಟಿ ಗಳಿಸಿದೆ. ₹2.41 ಲಕ್ಷ ಕೋಟಿ ವರಮಾನಗಳಿಸಿದೆ ಎಂದು ನಿಗಮವು, ಷೇರುಪೇಟೆಗೆ ಮಂಗಳವಾರ ತಿಳಿಸಿದೆ.
2024–25ನೇ ಪೂರ್ಣ ಆರ್ಥಿಕ ವರ್ಷದಲ್ಲಿ ₹48,151 ಕೋಟಿ ಲಾಭ ಗಳಿಸಿದೆ. ವರಮಾನವು ₹8.84 ಲಕ್ಷ ಕೋಟಿ ಆಗಿದೆ. ಪ್ರತಿ ಈಕ್ವಿಟಿ ಷೇರಿಗೆ ₹12 ಲಾಭಾಂಶ ನೀಡಲು ಮಂಡಳಿಯು ಶಿಫಾರಸು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.