ADVERTISEMENT

ಮಾರ್ಚ್‌ 30, 31ರಂದು ಎಲ್‌ಐಸಿ ಕಚೇರಿ ಕಾರ್ಯ ನಿರ್ವಹಣೆ

ಪಿಟಿಐ
Published 29 ಮಾರ್ಚ್ 2024, 12:44 IST
Last Updated 29 ಮಾರ್ಚ್ 2024, 12:44 IST
L
L   

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಕಚೇರಿಗಳು ಮಾರ್ಚ್‌ 30 ಮತ್ತು 31ರಂದು ಕೂಡ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

2023–24ನೇ ಹಣಕಾಸು ವರ್ಷವು ಮುಕ್ತಾಯಗೊಳ್ಳುತ್ತಿದೆ. ಹಾಗಾಗಿ, ಆದಾಯ ತೆರಿಗೆ ಉಳಿತಾಯದ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಈ ಎರಡೂ ದಿನಗಳಂದು ಕಚೇರಿಗಳು ತೆರೆದಿರುತ್ತವೆ ಎಂದು ಎಲ್‌ಐಸಿ ತಿಳಿಸಿದೆ.

ಶನಿವಾರ ಮತ್ತು ಭಾನುವಾರ ಕೂಡ ಕಾರ್ಯ ನಿರ್ವಹಿಸುವಂತೆ ಎಲ್ಲಾ ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಸೂಚಿಸಿದೆ. ಅಲ್ಲದೆ, ಸಾಮಾನ್ಯ ದಿನಗಳಲ್ಲಿನ ಕೆಲಸದ ಅವಧಿಯಂತೆ ಕಾರ್ಯ ನಿರ್ವಹಿಸಲು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಕೂಡ ಆದೇಶಿಸಿದೆ. ಈ ದಿನಗಳಲ್ಲಿ ಪಾಲಿಸಿದಾರರಿಗೆ ಯಾವುದೇ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.