ADVERTISEMENT

ಮೇ 17ರಿಂದ ಎಲ್‌ಐಸಿ ಷೇರುಗಳ ವಹಿವಾಟು?

ಪಿಟಿಐ
Published 27 ಏಪ್ರಿಲ್ 2022, 11:24 IST
Last Updated 27 ಏಪ್ರಿಲ್ 2022, 11:24 IST
   

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಮೇ 17ರಂದು ಷೇರುಪೇಟೆಗಳಲ್ಲಿ ವಹಿವಾಟು ಆರಂಭಿಸುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರವು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಎಲ್‌ಐಸಿಯ 22.13 ಕೋಟಿ ಷೇರುಗಳನ್ನು ಮಾರಾಟ ಮಾಡುತ್ತಿದೆ. ಮೇ 4ರಿಂದ 9ರವರೆಗೆ ಐಪಿಒಗೆ ಬಿಡ್ ಸಲ್ಲಿಸಲು ಅವಕಾಶ ಇರಲಿದೆ. ಪ್ರತಿ ಷೇರಿನ ಬೆಲೆಯನ್ನು ₹ 902–949ಕ್ಕೆ ನಿಗದಿ ಮಾಡಲಾಗಿದೆ.

ಬಿಡ್ ಸಲ್ಲಿಸಿದವರಿಗೆ ಷೇರುಗಳು ದೊರೆತರೆ ಅವು ಮೇ 16ರಂದು ಅವರ ಡಿ–ಮ್ಯಾಟ್ ಖಾತೆಗಳಿಗೆ ವರ್ಗಾವಣೆ ಆಗಲಿವೆ. ಕನಿಷ್ಠ 15 ಷೇರುಗಳಿಗೆ ಬಿಡ್ ಸಲ್ಲಿಸಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.