ADVERTISEMENT

ಎಲ್‌ಐಸಿ : ‘ಜೀವನ್‌ ಶಾಂತಿ’ ಯೋಜನೆಗೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 18:36 IST
Last Updated 25 ಅಕ್ಟೋಬರ್ 2018, 18:36 IST
   

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಇತ್ತೀಚೆಗೆ ಆರಂಭಿಸಿರುವ ‘ಜೀವನ್‌ ಶಾಂತಿ’ ಹೊಸ ಪಿಂಚಣಿ ಯೋಜನೆಗೆ ಉತ್ತೇಜಕರ ಪ್ರತಿಕ್ರಿಯೆ ದೊರೆತಿದೆ.

ಹೈದರಾಬಾದ್‌ನಲ್ಲಿ ನಡೆದ ಎಲ್‌ಐಸಿಯ ದಕ್ಷಿಣ ಮಧ್ಯೆ ವಲಯದ ಸಮ್ಮೇಳನದಲ್ಲಿ, ವಲಯದ ವ್ಯವಸ್ಥಾಪಕ ಎಸ್‌. ಟಿ. ಸುಸೀಲ್‌ ಕುಮಾರ್‌ ಅವರು ಯೋಜನೆಯ ಮಾರಾಟದ ವಿವರಗಳನ್ನು ಹಂಚಿಕೊಂಡಿದ್ದಾರೆ.

‘ಹೊಸ ಪಾಲಿಸಿಯ ಮಾರಾಟದಲ್ಲಿ ನಿಗಮವು ಇದುವರೆಗೆ ₹ 2,300 ಕೋಟಿಗಳಷ್ಟು ವಹಿವಾಟು ನಡೆಸಿದೆ. ದಕ್ಷಿಣ ಮಧ್ಯೆ ವಲಯವು ₹ 275 ಕೋಟಿಗಳಷ್ಟು ವಹಿವಾಟು ನಡೆಸಿದೆ. ಭವಿಷ್ಯದಲ್ಲಿ ತಮ್ಮ ಪಿಂಚಣಿ ನಿರ್ಧರಿಸುವ ಯುವ ಜನಾಂಗಕ್ಕೆ ಈ ಯೋಜನೆ ಹೆಚ್ಚು ಉಪಯುಕ್ತವಾಗಿದೆ. ಬಡ್ಡಿ ದರ ಸ್ಥಿರವಾಗಿರುವ ಅಥವಾ ಕಡಿಮೆಯಾಗುವ ಸಂದರ್ಭದಲ್ಲಿ ವೈವಿಧ್ಯಮಯ ಆಯ್ಕೆಗಳನ್ನು ಹೊಂದಿರುವ ಈ ಯೋಜನೆಯು ಹೆಚ್ಚು ಪ್ರಯೋಜನಕಾರಿ ಆಗಿರಲಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.